ಮಾರುಕಟ್ಟೆ ಮೌಲ್ಯ ವೃದ್ಧಿಸಿ ಹುಣಸೆ ಪಲ್ಪ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಉದ್ಘಾಟಿಸಲಾದ ಈ ಯೋಜನೆ, ತಂತ್ರಜ್ಞಾನ ಅಳವಡಿಸುವ ಮೂಲಕ ಹುಣಸೆ ಪಲ್ಪ್ ಹಾಗೂ ಬೀಜ ತೆಗೆಯಲ್ಪಟ್ಟ ಹುಣಸೆ ಹಣ್ಣನ್ನು ಶುದ್ಧ ಹಾಗೂ ಆರೋಗ್ಯಕರ ಪರಿಸರದಲ್ಲಿ ಉತ್ಪಾದಿಸಲು ಸಹಾಯಕವಾಗಿದ್ದು, ಇದರ ಮೂಲಕ ಗುಣಮಟ್ಟ ಸುಧಾರಿಸುವುದರ ಜೊತೆಗೆ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ವಿಜಯನಗರ ಜಿಲ್ಲೆಯ ಸುಮಾರು 55,000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಬೀಜ ಬೆಳೆದಿದ್ದು, ಈ ಉಪಕ್ರಮವು ಅನೇಕ ರೈತರಿಗೆ ನೇರ ಮತ್ತು ಪರೋಕ್ಷವಾಗಿ ಪ್ರಯೋಜನವಾಗುವ ಸಾಮರ್ಥ್ಯ ಹೊಂದಿದೆ.

- Advertisement - 

ಈ ಕೇಂದ್ರವು ವರ್ಷಕ್ಕೆ 400 ಮೆಟ್ರಿಕ್ ಟನ್ ಕಡಲೆಬೀಜ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, 575 ರೈತರಿಗೆ ನೇರ ಪ್ರಯೋಜನ ನೀಡುತ್ತದೆ ಹಾಗೂ 1,500ಕ್ಕೂ ಹೆಚ್ಚು ರೈತರಿಗೆ ಪರೋಕ್ಷ ಸಹಾಯ ಒದಗಿಸುತ್ತದೆ.

ಕೂಡ್ಲಿಗಿ ತಾಲೂಕಿನ ಮತ್ತೊಂದು ವೈಶಿಷ್ಟ್ಯವೆಂದರೆ ಹಳ್ಳಿಗಳ ಸುತ್ತಮುತ್ತಲಿನ ಹೊಲ ಮತ್ತು ರಸ್ತೆ ಬದಿಗಳಲ್ಲಿ ಬಹಳ ಪ್ರಮಾಣದಲ್ಲಿ ಹುಣಸೆ ಮರಗಳು ಕಂಡುಬರುತ್ತವೆ. ಪರಂಪರೆಯಿಂದಲೇ ಮಹಿಳೆಯರು ಈ ಹುಣಸೆ ಹಣ್ಣನ್ನು ಕಲ್ಲು ಅಥವಾ ಇತರೆ ಸಾಧನಗಳನ್ನು ಬಳಸಿ ಮರಗಳ ಕೆಳಗೆ ಕುಳಿತು ಪಾರಂಪರಿಕ ವಿಧಾನದಲ್ಲಿ ಸಂಸ್ಕರಿಸುತ್ತಿದ್ದರು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

- Advertisement - 

 

Share This Article
error: Content is protected !!
";