ಕೇಂದ್ರ ಸರ್ಕಾರದ ಉತ್ತೇಜನ ಬಳಸಿಕೊಂಡು ಸಕ್ಕರೆ-ಎಥಿನಾಲ್ ಉತ್ಪಾದನೆ ಹೆಚ್ಚಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೊರು:
ಸಕ್ಕರೆ ಉದ್ಯಮಕ್ಕೆ ಕೇಂದ್ರ ಸರ್ಕಾರವು ಉತ್ತೇಜನ ಕೊಡುತ್ತಿದ್ದು  ಕಾರ್ಖಾನೆಗಳು ಈ ಪ್ರೋತ್ಸಾಹ ಯೋಜನೆಗೆ ಸ್ಪಂದಿಸಿ ಎಥಿನಾಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿವೆ. ಇತ್ತಿಚಿನ ದಿನಗಳಲ್ಲಿ ಇದರ ಉತ್ಪಾದನಾ ಸಾಮಾರ್ಥ್ಯವು ದ್ವಿಗುಣಗೊಂಡಿದೆ.

ಈ ಪ್ರೋತ್ಸಾಹದ ಯೋಜನೆಯ ಪರಿಣಾಮವಾಗಿ ಎಥಿನಾಲ್ ಉತ್ಪಾದನೆಗೆ ಕಚ್ಚಾವಸ್ತುವಾದ ಕಬ್ಬು ಕಳೆದ ವರ್ಷದಲ್ಲಿ ಲಾಭದಾಯಕ ಬೆಲೆಯನ್ನ(ಎಫ್.ಆರ್.ಪಿ) ೧೦೦/- ಹೆಚ್ಚಿಸುವ ಮೂಲಕ ಮುಂಬರುವ ವರ್ಷಗಳಲ್ಲಿ ೨೫೦/ಎಂ.ಟಿ ಆಗಲಿದೆ ಎಂದು ಎಸ್.ಐ.ಎಸ್.ಎಂ.ಎ ಅಧ್ಯಕ್ಷ ವಿಜೇಂದ್ರಸಿಂಗ್  ತಿಳಿಸಿದ್ದಾರೆ.

ಇಂಥಹ ಸುಧಾರಿತ ಯೋಜನೆಗಳ ಕಬ್ಬಿನ ಬೆಲೆಗಳು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯನ್ನ ಬೆಂಬಲಿಸುತ್ತದೆ ಇದರಿಂದ ಕಬ್ಬಿನ ಉತ್ಪಾದನೆ ಹೆಚ್ಚಾಗುತ್ತದೆ. ಆದಾಗ್ಯೊ ಇಂತಹ ಪರಿಸ್ಥಿತಿಯಲ್ಲಿ ಉದ್ಯಮದ ಕಚ್ಚಾ ವಸ್ತುವಾದ ಕಬ್ಬಿನ ಬೆಲೆಗೆ ಅನುಗುಣವಾಗಿ ಸಕ್ಕರೆ ಮತ್ತು ಎಥಿನಲ್ ಬೆಲೆಗಳನ್ನ ಪರಿಷ್ಕರಿಸಬೇಕಗುತ್ತದೆ.

೨೦೨೪-೨೫ರಲ್ಲಿ ಸಕ್ಕರೆ ಉದ್ಯಮವು ಸುಮಾರು ೫೦೦ ಕೋಟಿ ಲೀಟರ್ ಎಥೇನಾಲನ್ನು ಉತ್ಪಾದಿಸಿ ಓ.ಎಂ.ಸಿ ಗಳಿಗೆ ಸರಬರಾಜು ಮಾಡುವ ನಿರೀಕ್ಷೆವಿದೆ. ಇದು ಕಚ್ಚಾ ತೈಲದ ಆಮದನ್ನ ಕಡಿಮೆಮಾಡಿ ವಿದೇಶಿ ವಿನಿಮಯ ಉಳಿತಾಯವಾಗಲು ಕಾರಣವಾಗುತ್ತದೆ.

ಪ್ರತಿವರ್ಷವು ಉತ್ಪಾದನೆ ಕಾರ್ಯ ಪ್ರಾರಂಭವಾಗುತ್ತಿದ್ದಂತೆ ಎಥಿನಾಲ್ ಬೆಲೆ ಪರಿಸ್ಪರಣೆಯಾಗುತ್ತದೆ. ಸಕ್ಕರೆ ಉದ್ಯಮ ಮತ್ತು ರೈತರನ್ನ ರಕ್ಷಿಸಲು ಎಂ.ಎಸ.ಪಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 ಮಾಸಿಕ ಕೋಟಾ ವ್ಯವಸ್ಥೆಯಿಂದಾಗಿ ಸಕ್ಕರೆ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ನಷ್ಟದ ಪರಿಸ್ಥಿತಿ ಬರುತ್ತದೆ ಇಂಥಹ ಸಂದರ್ಭದಲ್ಲಿ ಎಂ.ಎಸ್.ಪಿ ರೈತರು ಉದ್ಯಿಮೆ ಮತ್ತು ಇತರೆ ಮಧ್ಯಸ್ಥಗಾರನ್ನ ರಕ್ಷಿಸುತ್ತದೆ.

ಕಬ್ಬಿನ ಬೆಲೆ ಮತ್ತು ಎಥಿನಾಲ್ ಬೆಲೆಯಲ್ಲಿನ ಅಸಮತೋಲನದಿಂದಾಗಿ ರೈತರಿಗೆ ಪಾವತಿಗಳು, ವೇತನಗಳು, ಬ್ಯಾಂಕ್ ಸಾಲದ ಕಂತನ್ನ ಮರುಪಾವತಿಸುವುದು ಕಷ್ಟವಾಗುತ್ತದೆ. ಕಟಾವು, ಸಾಗಣೆ ಮತ್ತು ನಿರ್ವಹಣೆ ವೆಚ್ಚಗಳನ್ನ ನಿಭಾಯಿಸುವುದು ಕಷ್ಠವಾಗುತ್ತದೆ.

ಇಂತಹ ನಷ್ಠವು ಕರ್ನಾಟಕದಲ್ಲಿ ಸಕ್ಕರೆ ಮತ್ತು ಎಥಿನಾಲ್ ಉದ್ಯಮವು ರೈತರ ಮೇಲೆ ಮತ್ತು ಈ ಕ್ಷೇತ್ರದ ಎಲ್ಲರ ಮೇಲೆ ಬೀರಬಹುದಾದ ಸಾಂಭವ್ಯ ಸಂಕಷ್ಠವನ್ನ ತಡೆಗಟ್ಟುವುದು ಅತ್ಯಗತ್ಯವಾಗಿದೆ.  ಆದ್ದರಿಂದ ಎಥಿನಾಲ್ ಬೆಲೆ ಮತ್ತು ಸಕ್ಕರೆಗೆ ಎಂ.ಎಸ್.ಪಿನಲ್ಲಿ ಪರಿಷ್ಖರಣೆ ಮಾಡುವಂತೆ ಸರ್ಕಾರಕ್ಕೆ ಮತ್ತು ಇದರ ನೀತಿ ನಿರೋಪಕರಿಗದೆ ಸೌತ್ ಇಂಡಿಯನ್ ಶುಗರ್ ಮಿಲ್ಸ ಅಸೋಶಿಯೇಷನ್ ಅತ್ಯಂತ ಗೌರವಯುತವಾಗಿ ವಿನಂತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";