ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ ಕಳ್ಳತನ ಪ್ರಕರಣಗಳು ಮತ್ತು ಇತರೆ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ.
ಮಂಗಳವಾರ ರಾತ್ರಿ ಮೆದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದ್ದು ಚಿತ್ರದುರ್ಗದ ಜನ ಭಯಭೀತರಾಗಿದ್ದಾರೆ. ಮೂರು ಅಂಗಡಿಗಳ ಮೇಲಿನ ಶೀಟ್‌ಗಳನ್ನು ಮುರಿದು ಒಳಗೆ ಇಳಿದಿರುವ ಚಾಲಾಕಿಗಳು ನಗದು ಕಳುವು ಮಾಡಿದ್ದಾರೆ.
ಎಸ್ಆರ್ ಎಂಎಸ್ ಮೋಟಾರ್‍ಸ್‌ನ ಶೀಟ್ ಮುರಿದು ಕೆಳಗೆ ನುಸುಳಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂ. ವಿನಾಯಕ ಪ್ರಾವಿಜನ್ ಸ್ಟೋರ್‌ನಲ್ಲಿ ಹನ್ನೆರಡು ಸಾವಿರ ರೂ. ಹಾಗೂ ಶಿವನ್ ಫಾರ್ಮದಲ್ಲಿ ೨೦ ಸಾವಿರ ರೂ.ಗಳ ಕಳ್ಳತನವಾಗಿದೆ.
ಎಸ್.ಆರ್.ಎಂ.ಎಸ್. ಮೋಟಾರ್‍ಸ್‌ನಲ್ಲಿ ಪೀಠೋಪಕರಣಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಹಣಕ್ಕಾಗಿ ಹುಡುಕಾಡಿರಬಹುದೆಂಬುದು ಗೊತ್ತಾಗುತ್ತದೆ.

ಬುಧವಾರ ಬೆಳ್ಳಿಗೆ ಮೂರು ಅಂಗಡಿಗಳ ಮಾಲೀಕರುಗಳು ಬೀಗ ತೆರೆದು ಒಳಗೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ.

