ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ,ದೊಡ್ಡಬೆಳವಂಗಲ ಹೋಬಳಿ ಹುಲ್ಲುಕುಂಟೆ ಗ್ರಾಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಹುಲ್ಲುಕುಂಟೆ ಗ್ರಾಮ ಪಂಚಾಯ್ತಿ ಪಿ.ಡಿ.ಒ ಹಾಗೂ ಸಿಬ್ಬಂದಿಗಳ ವಿರದ್ದ ತಹಶೀಲ್ದಾರ್, ಇ.ಒ, ಸಿ.ಇ.ಒ.ರವರಿಗೆ ತಿಳಿಸಿ 10 ದಿನ ಕಳೆದಿದ್ದರೂ ಯಾವುದೇ ಕ್ರಮ ಕೈ ಗೊಳ್ಳದಿರುವುದನ್ನು ಕುರಿತು ಜ.13 ರ ಸೋಮವಾರದಿಂದ ಹುಲ್ಲು ಕುಂಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಪತ್ರಿಕಾ ವಿತರಕ, ಹಾಗೂ ವಕೀಲರು ಆದ ಹುಲ್ಲುಕುಂಟೆ ಮಹೇಶ ಅವರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಕೂರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಮಾರು 50 ವರ್ಷಗಳ ಹಿಂದೆ ಆಂಜನೇಯ ಸ್ವಾಮಿ ಇನಾಂಮ್ತಿ ಜಮೀನಿನಲ್ಲಿ ಹಕ್ಕುಪತ್ರ ನೀಡಿ ಅವುಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದು ,ಖಾತೆಗಾಗಿ ಪಂಚಾಯಿತಿ ಅದಿಕಾರಿಗಳಿಗೆ ಮನವಿ ಸಲ್ಲಿಸಿಲಾಗಿದ್ದು ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಅಲ್ಲಿ ವಾಸ ಮಾಡುತ್ತಿರುವ ಜನರಿಗೆ ಖಾತಾ ಮಾಡಿಕೊಡಲು ನಮ್ಮ ಬಳಿ ದಾಖಲೆಗಳಿಲ್ಲ. ನೀವೇ ಒದಗಿಸಿ ಎನ್ನುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ವಕೀಲ ಮಹೇಶ್ ದೂರಿದ್ದಾರೆ.
ಗ್ರಾಮದ ಸುಮಾರು 40 ಕುಟುಂಬಗಳು ಸರ್ವೆ ನಂ.162ರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅದರಲ್ಲಿ ಕೆಲವರಿಗೆ ತಹಸೀಲ್ದಾರ್ ಕಛೇರಿಯಿಂದ 94ಸಿ ಅಡಿ ತಾತ್ಕಾಲಿಕ ಹಕ್ಕು ಪತ್ರ ನೀಡಿರುತ್ತಾರೆ. ಕೆಲವರಿಗೆ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಖಾತಾ ಮಾಡಿ ಕೊಟ್ಟಿರುತ್ತಾರೆ.
ಆದರೆ, ಈಗ ಆ ಜಾಗ ರಸ್ತೆಗೆ ಸೇರುವುದೆಂದು ಗ್ರಾಮ ಪಂಚಾಯ್ತಿ ಪಿ.ಡಿ.ಓ ರವರು ಹೇಳುತಿದ್ದಾರೆ,ಆದರೆ ಯಾವ ರಸ್ತೆ, ಯಾರು ಮಂಜೂರು ಮಾಡಿದ್ದಾರೆಂದರೆ ಅವರ ಬಳಿ ಉತ್ತರವಿಲ್ಲ. ರಾಷ್ಟ್ರೀಯ ಹೆದ್ದಾರಿ ಗಾಗಿ ಭೂಸ್ವಾಧೀನವಾದ ಭೂಮಿ ಹೊರತುಪಡಿಸಿ ಉಳಿದ ಜಾಗದಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವ ಮುನ್ನ 2024ರಲ್ಲಿ ನನಗೆ ಕಟ್ಟಡ ಕಟ್ಟಲು ಗ್ರಾ.ಪಂ.ವತಿಯಿಂದ ಅನುಮತಿ ನೀಡಿ ಅದರ ನವೀಕರಣಕ್ಕೆ ಅರ್ಜಿ ಸಲ್ಲಿಸಿದಾಗ ನಿರಾಕರಿಸುತ್ತಿದ್ದಾರೆ.
ವಿದ್ಯಾವಂತರಾದ ನಮಗೆ ಈ ಗತಿ ಆದರೆ ಗ್ರಾಮೀಣ ಪ್ರದೇಶದ ಅವಿದ್ಯಾವಂತ ಹಿರಿಯ ನಾಗರೀಕರ ಕಥೆ ಹೇಗೆ.ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಧರಣಿ ಆರಂಭಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಮಹೇಶ ಅವರು ತಿಳಿಸಿದ್ದಾರೆ.