ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಹೊರ ವಲಯದ ಬಬ್ಬೂರು ಗ್ರಾಮದಲ್ಲಿನ ಪರಿವರ್ತನಾ ಪದವಿ ಪೂರ್ವ ಕಾಲೇಜಿನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಬಬ್ಬೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅರುಣಕುಮಾರ್, ಬಬ್ಬೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ್, ಗ್ರಾಮ ಪಂಚಾಯ್ತಿಯ ಮಾಜಿ ಉಪ ಅಧ್ಯಕ್ಷ ಏಕಾಂತ್, ಸದಸ್ಯರಾದ ಧನಂಜಯ ಮತ್ತು ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಮತ್ತು ಗ್ರಾಮದ ಮುಖಂಡರಾದ ಸುರೇಶ್, ಪ್ರಾಂಶುಪಾಲರು,ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ನೆರವೇರಿಸಿದರು.
ಕುಮಾರಿ ಪ್ರಿಯದರ್ಶಿನಿ ಬಿ ಆರ್ ನಿರೂಪಿಸಿದರು. ಕುಮಾರಿ ಎನ್ ಹರ್ಷಿತಾ ಸಂಗಡಿಗರು ಪ್ರಾರ್ಥನೆ ಮಾಡಿದರು. ಕುಮಾರಿ ನೇಹಾ ಜೆ ಸ್ವಾಗತಿಸಿದರು. ಕುಮಾರಿ ಕುಮುದಾ ಎ ವಂದಿಸಿದರು.

