ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ ಭಾರತ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ವಿಕ್ರಮ ಸಾಧಿಸಿರುವ ಇಸ್ರೋಗೆ ಸಾಧನೆಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಮತ್ತಿತರ ಗಣ್ಯ ಅಭಿನಂದನೆಗಳನ್ನು ಮಹಾಪೂರ ಹರಿದು ಬಂದಿವೆ.

ಭಾರತದ ಮಹತ್ವಾಂಕ್ಷೆಯ “ಸ್ಪೇಸ್‌ಡಾಕಿಂಗ್‌” ಯೋಜನೆ ಸ್ಪೆಡೆಕ್ಸ್‌(SpaDax) ಮಿಷನ್‌ಫಲಪ್ರದವಾಗಿದೆ.  PSLV-C60 ರಾಕೆಟ್‌ಉಡಾವಣೆ ಯಶಸ್ವಿಯಾಗಿದ್ದು SDX01 ಮತ್ತು SDX02 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನಿಗದಿತ ಕಕ್ಷೆಗೆ ಸೇರಿಸಲಾಗಿದೆ. 

ಅಂತರಿಕ್ಷದಲ್ಲಿ ನಿಲ್ದಾಣ ಸ್ಥಾಪಿಸಲು ಮೊದಲ ಹೆಜ್ಜೆ ಇಟ್ಟಿರುವ ಭಾರತ, ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ 4ನೇ ರಾಷ್ಟ್ರ ಎಂಬ ಖ್ಯಾತಿಗೆ ನಮ್ಮ ಭಾರತ ಸೇರ್ಪಡೆಯಾಗಿದೆ.

ಈ ಯೋಜನೆಗೆ ಕರ್ನಾಟಕದ ಕೊಡುಗೆಯೂ ಇದ್ದು, ಬೆಂಗಳೂರಿನ ಯು.ಆರ್.‌ರಾವ್‌ಉಪಗ್ರಹ ಕೇಂದ್ರದಲ್ಲಿ ಸ್ಪೆಡೆಕ್ಸ್‌ನೌಕೆಗಳ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಬಾಹ್ಯಾಕಾಶದಲ್ಲಿ ಡಾಕಿಂಗ್‌ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಉಡಾವಣೆಗೊಂಡ ಸ್ಪೇಸ್ ಡಾಕಿಂಗ್ ಎಕ್ಸ್‌ಪೆರಿಮೆಂಟ್ (ಸ್ಪಾಡೆಕ್ಸ್) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳ ನಂತರ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ಸಾಲಿಗೆ ನಮ್ಮ ಭಾರತ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ ಭಾರತ ! ಬಾಹ್ಯಾಕಾಶದಲ್ಲಿ ಡಾಕಿಂಗ್‌ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಉಡಾವಣೆಗೊಂಡ ಸ್ಪೇಸ್ ಡಾಕಿಂಗ್ ಎಕ್ಸ್‌ಪೆರಿಮೆಂಟ್ (ಸ್ಪಾಡೆಕ್ಸ್) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

 

 

- Advertisement -  - Advertisement - 
Share This Article
error: Content is protected !!
";