ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೋದಿ ಅವರ ಅಚ್ಚೇದಿನದಲ್ಲಿ ಭಾರತದ ವಿದೇಶಿ ಸಾಲ 711.8 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಈ ಸಾಲದ ಮಟ್ಟವು ಭಾರತದ ಆರ್ಥ ವ್ಯವಸ್ಥೆಯ ಮೇಲೆ ಹಲವು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಈಗಾಗಲೇ ರೂಪಾಯಿ ಅಪಮೌಲ್ಯ, ಜಿಡಿಪಿ ಕುಸಿತದಿಂದ ತತ್ತರಿಸಿರುವ ದೇಶದ ಅರ್ಥವ್ಯವಸ್ಥೆಗೆ ಸಾಲದ ಹೊರೆ ಮತ್ತಷ್ಟು ಆಘಾತ ನೀಡಲಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸುವುದು,ಮುಂದಿನ ತಲೆಮಾರಿಗೆ ಸಾಲದ ಹೊರೆ ಹೊರೆಸಿ ಹೋಗುವುದೇ ‘ವಿಕಾಸ‘ವೇ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪ್ರಶ್ನಿಸಿದೆ?