ಜಾಗತಿಕ ಆರ್ಥಿಕತೆಯಲ್ಲಿ ಅಗ್ರ ಸ್ಥಾನದೊಂದಿಗೆ ಮುನ್ನಡೆಯುತ್ತಿರುವ ಭಾರತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಆರ್ಥಿಕತೆಯ ಬೆಳವಣಿಗೆಯಲ್ಲಿ ಅಗ್ರ ಸ್ಥಾನದೊಂದಿಗೆ ಮುನ್ನಡೆಯುತ್ತಿದೆ ಭಾರತ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ಆರ್ಥಿಕತೆಯು ಅತ್ಯುತ್ತಮ ಬೆಳವಣಿಗೆ ಕಾಣುತ್ತಿರುವುದು ಭಾರತದ ವಿಕಸಿತ ಪಯಣಕ್ಕೆ ಸುಸ್ಪಷ್ಟ ನಿದರ್ಶನವಾಗಿದೆ.

2015 ರಲ್ಲಿ 179 ಲಕ್ಷ ಕೋಟಿ ಇದ್ದ ಭಾರತದ ಆರ್ಥಿಕತೆಯು 2024-25ರ ಆರ್ಥಿಕ ವರ್ಷದಲ್ಲಿ 365 ಲಕ್ಷ ಕೋಟಿಗೆ ಏರಿಕೆ ಕಂಡಿರುವುದು ಐಎಂಎಫ್ ವರದಿಯಲ್ಲಿ ಮೆಚ್ಚುಗೆ ದೊರೆತಿದೆ. ಶೇ.105 ರಷ್ಟು ಜಿಡಿಪಿ ಏರಿಕೆಯ ಮೂಲಕ ಚೀನಾ, ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್ ದೇಶಗಳನ್ನು ಹಿಂದಿಕ್ಕಿರುವ ಭಾರತದ ಬೆಳವಣಿಗೆ, ರಫ್ತು, ಅಭಿವೃದ್ಧಿಯ ವೇಗವನ್ನು ಕಂಡು ಐಎಂಎಫ್ ಪ್ರಶಂಸನೆ ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿ.

ಜಾಗತಿಕ ಮುಂಚೂಣಿಯಲ್ಲಿ ಭಾರತವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿಜೀ ಅವರ ಮಹಾಸಂಕಲ್ಪ ಈಡೇರುವ ದಿನಗಳು ಸನಿಹದಲ್ಲಿಯೇ ಇದೆ. “ನಾವೆಲ್ಲರೂ ಒಂದು ಭಾರತೀಯರು ಎಂದೆಂದೂ ಮುಂದು” ಎಂಬುವ ಘೋಷವಾಕ್ಯವನ್ನು ಹೊತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಹೆಗಲು ಕೊಡೋಣ ಎಂದು ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ.

 

Share This Article
error: Content is protected !!
";