ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಭಾರತವೀಗ ಜಗತ್ತಿನ 4 ನೇ ಅತೀದೊಡ್ಡ ಆರ್ಥಿಕ ರಾಷ್ಟ್ರ”. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಸಮರ್ಥ ಹಾಗೂ ಸದೃಢ ನಾಯಕತ್ವದಲ್ಲಿ ದಶಕಗಳ ಕನಸು ಕೊನೆಗೂ ನನಸಾಗಿದ್ದು ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತ ಜಗತ್ತಿನ 4ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಶತಕೋಟಿ ಭಾರತೀಯರು ಹೆಮ್ಮೆ ಪಡುವ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೀತಿ ಆಯೋಗ CEO ಮಾಹಿತಿ ನೀಡಿದ್ದಾರೆ. ಭಾರತವು ಅಧಿಕೃತವಾಗಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು ಆರ್ಥಿಕ ಹಾದಿಯಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದೇವೆ.
ಹೆಮ್ಮೆಯ ಪ್ರಧಾನಿಗಳ ವಿಕಸಿತ ಭಾರತದ ಅಭಿವೃದ್ಧಿಯ ದೃಢ ಸಂಕಲ್ಪಿತ ಆಡಳಿತದ ಪರಿಣಾಮವಾಗಿ ಭಾರತದ ಅಭಿವೃದ್ಧಿಯ ವೇಗ ಕಂಡು ವಿಶ್ವವೇ ನಿಬ್ಬೆರಗಾಗಿ ನೋಡುವಂತಾಗಿದೆ. ಇದು ಪ್ರಧಾನಿಗಳ ದೂರದೃಷ್ಟಿ ಆಡಳಿತದ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.