ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಹೋರಾಟವು ಪಾಕಿಸ್ತಾನವನ್ನು ಅತಂತ್ರಕ್ಕೆ ತಳ್ಳಿದ್ದಲ್ಲದೆ ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುವಂತಾಗಿದೆ.
ಮಹಿಳಾ ಸೇನಾಧಿಕಾರಿಗಳು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತದ ಪಶ್ಚಿಮ ಗಡಿಗಳ ಮೇಲೆ ಪಾಕಿಸ್ತಾನಿ ಸೇನೆಯು ನಿರಂತರವಾಗಿ ದಾಳಿ ಮಾಡುತ್ತಿದೆ. ಅದು ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಯುದ್ಧ ಸಾಮಗ್ರಿಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿದೆ. ಭಾರತ ಅನೇಕ ಅಪಾಯಗಳನ್ನು ತಟಸ್ಥಗೊಳಿಸಿತು ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ.
ಭಾರತ ದೇಶದ 26ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಾಕಿಸ್ತಾನವು ವಾಯುದಳದ ಮೂಲಕ ನುಸುಳಲು ಪ್ರಯತ್ನಿಸಿತು. ಉಧಮ್‌ಪುರ, ಭುಜ್, ಪಠಾಣ್‌ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಸೇನಾ ಉಪಕರಣಗಳು ಹಾನಿಗೊಳಿಸಿ ಸಿಬ್ಬಂದಿಗೆ ತೊಂದರೆ ನೀಡಿದ್ದಾರೆ. ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಲು ಬೆಳಗಿನ ಜಾವ 1:40 ಕ್ಕೆ ಹೈಸ್ಪೀಡ್ ಕ್ಷಿಪಣಿಗಳನ್ನು ಬಳಸಿದರು. ಜಮ್ಮು-ಕಾಶ್ಮೀರದ ಆರೋಗ್ಯ ಸೌಲಭ್ಯಗಳು ಮತ್ತು ಶಾಲೆಗಳ ಮೇಲೂ ದಾಳಿ ಮಾಡಿದ್ದಾರೆ. ಉಧಮ್‌ಪುರ, ಪಠಾಣ್‌ಕೋಟ್, ಅಧಮ್‌ಪುರ ಮತ್ತು ನಲಿಯಾದಲ್ಲಿನ ವಾಯುನೆಲೆಗಳು ದಾಳಿಯ ಗುರಿಗಳಲ್ಲಿ ಸೇರಿವೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ.
ಪಾಕಿಸ್ತಾನವು ಸುಮಾರು 300 ರಿಂದ 400 ಡ್ರೋನ್‌ಗಳನ್ನು ಬಳಸಿ ದೇಶದ 26 ಸ್ಥಳಗಳಲ್ಲಿ ಒಳನುಸುಳಲು ಪ್ರಯತ್ನಿಸಿದೆ. ಡ್ರೋನ್‌ಗಳ ಅವಶೇಷಗಳ ವಿಧಿವಿಜ್ಞಾನ ತನಿಖೆ ನಡೆಸಲಾಗುತ್ತಿದೆ. ಆರಂಭಿಕ ವರದಿಗಳು ಅವು ಟರ್ಕಿಶ್ ಆಸಿಸ್‌ಗಾರ್ಡ್ ಸೊಂಗಾರ್ ಡ್ರೋನ್‌ಗಳು ಎಂದು ಸೂಚಿಸುತ್ತವೆ ಎಂದು ಅವರು ತಿಳಿಸಿದರು.
ಪಾಕಿಸ್ತಾನದ ಕ್ರಮಗಳು ಪ್ರಚೋದನೆ ಮತ್ತು ಉಲ್ಬಣಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಪಾಕಿಸ್ತಾನದ ಕಡೆಯಿಂದ ಈ ಪ್ರಚೋದನೆ ಮತ್ತು ಉಲ್ಬಣಗಳಿಗೆ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡಿದೆ. ಇಂದು ಬೆಳಗ್ಗೆ, ಈ ಉಲ್ಬಣ ಮತ್ತು ಪ್ರಚೋದನಕಾರಿ ಮಾದರಿಯ ಪುನರಾವರ್ತನೆಯನ್ನು ನಾವು ನೋಡಿದ್ದೇವೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದರು.
ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿ, ಶ್ರೀನಗರ, ಅವಂತಿಪುರ ಮತ್ತು ಉಧಂಪುರ್ ವಾಯುನೆಲೆಗಳಲ್ಲಿರುವ ಆಸ್ಪತ್ರೆಗಳು ಮತ್ತು ಶಾಲಾ ಆವರಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ದಾಳಿ ಮಾಡಿದೆ. ಇದು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಬೇಜವಾಬ್ದಾರಿ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.