ಭಾರತ ಅತಿ ಶೀಘ್ರ ಪಾಕಿಸ್ತಾನ ಆಗಲಿದೆ-ಮಾದಾರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದಾಳಿ, ಹತ್ಯೆ, ಲೂಟಿ, ಆಸ್ತಿ ಹಾನಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಚಿಂತಾಜನಕ ಸಂಗತಿ. ಇಂತಹ ಹೇಯಕೃತ್ಯವನ್ನು ಹಿಂದು ಹಿತರಕ್ಷಣಾ ಸಮಿತಿ, ಚಿತ್ರದುರ್ಗ ಸಂಪೂರ್ಣವಾಗಿ ಖಂಡಿಸುತ್ತದೆ.

ಇದರ ಅಂಗವಾಗಿ ನಗರದ ಆನೆಬಾಗಿಲ ಬಳಿಯಿಂದ ಜಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಹಿಂದು ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಅದರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.

- Advertisement - 

ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ನೆರೆಹೊರೆಯವರ ದಬ್ಬಾಳಿಕೆ, ದೌರ್ಜನ್ಯದಿಂದ ಮುಂದೆ ಭಾರತ ಕೂಡ ಪಾಕಿಸ್ತಾನ ಆದರೂ ಅಚ್ಚರಿ ಪಡಬೇಕಿಲ್ಲ ಎಂದು ಸ್ವಾಮೀಜಿ ಎಚ್ಚರಿಸಿದರು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಪರಧರ್ಮ ಸಹಿಷ್ಣುತೆ ದೇಶದಲ್ಲಿದೆ. ಭಾರತ ದೇಶದಲ್ಲಿ ಹಲವು ಭಾಷಿಕರು, ಧರ್ಮದವರಿದ್ದು ಕೂಡಿ ಬಾಳುತ್ತಿದ್ದೇವೆ. ಆದರೆ ಅಕ್ಕ ಪಕ್ಕದ ದೇಶಗಳು ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದು ಹೇಳಿದರು.

ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತಿತರ ದೇಶಗಳಲ್ಲಿ ಭಾರತೀಯರ ಅದರಲ್ಲೂ ಹಿಂದೂಗಳ ಸಂಖ್ಯೆ ತೀವ್ರ ರೀತಿಯಲ್ಲಿ ಇಳಿಕೆಯಾಗುತ್ತಿದೆ. ಇದು ಎಚ್ಚರಿಕೆ ಗಂಟೆಯಾಗಿದೆ. ಮುಸ್ಲಿಂರು ಶೇ.20ರಷ್ಟು ಹೆಚ್ಚಳ ಆಗಿದೆ. ಹಿಂದೂಗಳು ಅಲ್ಲಿ ಶೇ.7ಕ್ಕೆ ಕುಸಿದಿದೆ. ಮುಂದೆ ಇದು 0.7ಕ್ಕೆ ಕುಸಿದರೂ ಅಚ್ಚರಿ ಪಡಬೇಕಿಲ್ಲ.

- Advertisement - 

ಮುಂದೆ ಹಿಂದೂಗಳು ಕಣ್ಮರೆಯಾಗುವ ಸಾಧ್ಯತೆ ಎಲ್ಲ ಇದೆ. ಒಂದು ಎರಡು ಮಕ್ಕಳ ಬೇಡ, 3ನೇ ಮಗು ಕೂಡ ಮಾಡಿಕೊಳ್ಳಬೇಕು. ಇಬ್ಬರು ಮಕ್ಕಳನ್ನು ಸಾಕಲು ನಾವು ಹಿಂದೇಟು ಹಾಕುತ್ತಿದ್ದೇವೆ. ಆದರೆ ಮನೆಯಲ್ಲಿ ಎರಡು-ಮೂರು ನಾಯಿ, ಎರಡು ಮೂರು ಕಾರುಗಳನ್ನು ಇಟ್ಟು ನಿರ್ವಹಣೆ ಮಾಡುತ್ತೇವೆ. ಆದರೆ ಇಬ್ಬರು ಮಕ್ಕಳನ್ನು ಸಾಕಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದು ಸ್ವಾಮೀಜಿ ಹೇಳಿದರು.

ಭಾರತೀಯರಾದ ನಾವುಗಳು ನಮ್ಮಲ್ಲಿ ಎಲ್ಲರನ್ನು ಒಂದು ಗೂಡಿಸುತ್ತೇವೆ ಆದರೆ ಬೇರೆ ರಾಷ್ಟ್ರಗಳು ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿರುವುದು ಖಂಡನೀಯ, ಬೇರೆ ರಾಷ್ಟ್ರಗಳಿಂದ ದೇಶಕ್ಕೆ ಬಂದವರಿಗೆ ಸಹಾಯ ಮಾಡುತ್ತೇವೆ. ಆದರೆ ಬೇರೆ ರಾಷ್ಟ್ರಗಳಲ್ಲಿ ಇರುವ ನಮ್ಮ ಹಿಂದೂಗಳ ಮೇಲೆ ಈ ರೀತಿಯಾದ ಕೃತ್ಯ ನಡೆಸುವುದು ಆತಂಕಕ್ಕೆ ಕಾರಣವಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವುದರ ಮೂಲಕ ಬಾಂಗ್ಲಾ ದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.

ಶಿವಮೊಗ್ಗದ ಸಂಘ ಪರಿವಾರದ ಪ್ರಮುಖರಾದ ಪಟ್ಟಾಭಿಜೀಯವರು, ನಮ್ಮ  ಹೋರಾಟ, ಸಭೆ ಯಾವುದೇ ಸರ್ಕಾರ, ರಾಜಕೀಯ ಪಕ್ಷ, ಮುಸ್ಲಿಂರವರ ವಿರುದ್ದ ಅಲ್ಲ.  ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸಭೆ ನಡೆಸಲಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಜಾಗೃತಿ ಸಭೆಯಾಗಿದೆ. ಇಂದಿನ ದಿನಮಾನದಲ್ಲಿ ಪ್ರಪಂಚವೇ ಸಣ್ಣ ಕುಟುಂಬವಾಗಿದೆ. ಆದ್ದರಿಂದ ಇಲ್ಲಿ ನಡೆಯುವ ಪ್ರತಿಭಟನಾ ಸಭೆ ಮೂಲಕ ಅಲ್ಲಿನ ಹಿಂದೂಗಳಿಗೆ ಧೈರ್ಯ ತಂಬುವ ಕಾರ್ಯ ಮಾಡಲಾಗುತ್ತಿದೆ ಎಂದರು. 

ಬಾಂಗ್ಲಾದೇಶದ ಸರ್ಕಾರ ಮತ್ತು ಅನ್ಯ ಸರ್ಕಾರಿ ಸುರಕ್ಷಾ ಸಂಸ್ಥೆಗಳು ಹಲ್ಲೆ, ದೌರ್ಜನ್ಯಗಳನ್ನು ನಿಲ್ಲಿಸುವ ಬದಲು ಕೇವಲ ಮೂಕ ಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಬಲವಂತವಾಗಿ ಹಲ್ಲೆ ಮಾಡಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ತಮ್ಮ ಸ್ವರಕ್ಷಣೆಗಾಗಿ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಎತ್ತಿದ್ದ ಧ್ವನಿ ಹತ್ತಿಕ್ಕುವ ಮತ್ತು ಅವರ ಮೇಲೆ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ಎಸಗುವ ಹೊಸ ಯುಗವು ಹೊರಹೊಮ್ಮುತ್ತಿರುವಂತೆ ತೋರುತ್ತಿದೆ. ಹಾಗೆಯೇ ಇಂತಹ ಘಟನೆಗಳ ವಿರುದ್ಧ ಹಿಂದೂಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್‌ಸನ್ಯಾಸಿ ಚಿನ್ಮಯ್ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರಕಾರ ಬಂಧಿಸಿ ಸೆರೆಮನೆಗೆ ಕಳುಹಿಸಿರುವುದು ಅನ್ಯಾಯ ಪೂರ್ಣವಾದದ್ದು ಎಂದರು.

ಹಿಂದು ಹಿತರಕ್ಷಣಾ ಸಮಿತಿ ಬಾಂಗ್ಲಾದೇಶ ಸರ್ಕಾರಕ್ಕೆ  ಆಗ್ರಹಪಡಿಸುವುದೇನೆಂದರೆ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲುವುದನ್ನು ಅವರು ಖಚಿತಪಡಿಸಬೇಕು ಹಾಗೂ ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಸಾಧ್ಯವಾದಷ್ಟು ಮುಂದುವರಿಸಬೇಕು. ಹಾಗೂ ಅದಕ್ಕೆ ಪೂರಕವಾಗಿ ಅವಶ್ಯ ಕ್ರಮಗಳನ್ನು ಅತೀ ಶೀಘ್ರದಲ್ಲಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ವಿಶ್ವ ಶಾಂತಿ ಮತ್ತು ಸಹೋದರತ್ವಕ್ಕೆ ಅವಶ್ಯಕವಾಗಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಬಯಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ,

ಸಂಪತ್‌ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಸಮ್ಮ, ವಕ್ತಾರ ನಾಗರಾಜ್ ಬೇದ್ರೆ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಚಂದ್ರಶೇಖರ್, ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Share This Article
error: Content is protected !!
";