ಪ್ರಭುತ್ವದ ಉಕ್ಕಿನ ಮಹಿಳೆ ಇಂದಿರಾಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಮತಿ ಇಂದಿರಾಗಾಂಧಿ ಮಾಜಿ ಪ್ರಧಾನಮಂತ್ರಿಗಳು ಅವರ ಪುಣ್ಯಸ್ಮರಣೆ ದಿನವಾದ ಇಂದು ಅವರ ದಿಟ್ಟತನದ ಆಡಳಿತವನ್ನು ಸ್ಮರಿಸುವ ಮೂಲಕ ಗೌರವದ ನಮನಗಳನ್ನು ಅರ್ಪಿಸುತ್ತೇನೆ.

ಶ್ರೀಮತಿ ಇಂದಿರಾಗಾಂಧಿಯವರ ಪರಿಪೂರ್ಣವಾದ ಹೆಸರು ಇಂದಿರಾ ಪ್ರಿಯದರ್ಶಿನಿ ಗಾಂಧಿನವೆಂಬರ್ 19, 1917, ಅಲಹಾಬಾದ್ ನಲ್ಲಿ ಇಂದಿರಾಗಾಂಧಿ ಜನಿಸಿದ್ದರು.

 ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಭಾರತದಲ್ಲಿ ಸತತ 3 ಅವಧಿಗೆ ಪ್ರಧಾನಿಯಾಗಿ  4ನೇ  ಅವಧಿಯಾದ  1980 ರಿಂದ 1984ರ ಸಮಯದಲ್ಲಿ ಅವರ ಭದ್ರತಾ ಸಿಬ್ಬಂದಿಯಿಂದಲೆ ಹತ್ಯೆಯಾಗುತ್ತಾರೆ.

ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನದಲ್ಲಿದ್ದ ಅವಧಿಯ ದಿನಗಳಲ್ಲಿಯೇ ಅಕ್ಟೋಬರ್ 31=1984ರಂದು  ಹತ್ಯೆಯಾಗುತ್ತಾರೆ. ಈ ಒಂದು ಆಘಾತಕಾರಿ ವಿಷಯದಿಂದ ಪ್ರಪಂಚದ ನಾಗರಿಕ ಸಮಾಜ ಹಾಗೂ ಸಾಮಾಜಿಕ ಚಿಂತಕರು ಇಂದಿರಾಗಾಂಧಿ ಅವರ ಹತ್ಯೆಯ ವಿಚಾರದಲ್ಲಿ ಮರುಗುತ್ತಾರೆ.

ದೇಶವಿದೇಶಗಳ ಪ್ರಜ್ಞಾವಂತ ನಾಗರಿಕರು ಹಾಗೂ ರಾಜಕೀಯ ಮುಖಂಡರುಗಳು ಪ್ರಧಾನಮಂತ್ರಿ ಸ್ಥಾನದಲ್ಲಿದ ಇಂದಿರಾಗಾಂಧಿ ಅವರ ಆಡಳಿತದ ದಿಟ್ಟತನವನ್ನು ಗುರುತ್ತಿಸಿ ಭಾರತ ದೇಶದ ಉಕ್ಕಿನ=ಮಹಿಳೆ ಎಂದು ದೊಡ್ಡ ಪ್ರಮಾಣದ ಗೌರವದ ಬಿರುದನ್ನು ನೀಡಿ ಗೌರವಿಸುತ್ತಿದ್ದರು.

ಇಂದಿರಾಗಾಂಧಿ ಅವರ ಆಡಳಿತದ ಅವಧಿಯಲ್ಲಿ ಬಡವರ ಹಾಗೂ ಮಧ್ಯಮವರ್ಗದ ಜನತೆಯ ಸಬಲೀಕರಣಕ್ಕೆ ಸರ್ಕಾರದ ಆಡಳಿತದಲ್ಲಿ 20 ಅಂಶಗಳ ಯೋಜನೆ ಜಾರಿಗೆ ತರುವ ಮೂಲಕ ಆ ವರ್ಗದ ಜನತೆಯ ಬೆಳವಣಿಗೆಗೆ ಕಾರಣವಾದರು. ಈ ಒಂದು ಮಹತ್ವದ ವಿಚಾರದಿಂದ  ದೇಶದಲ್ಲಿ ಬಡತನದ ನಿರ್ಮೂಲನೆ ಕಾರಣೀಭೂತರಾಗಿದ್ದಾರೆ.

  ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನದಲ್ಲಿ ಇದ್ದಂತಹ ಸಮಯದಲ್ಲಿ ಶ್ರೀ ಎಸ್ ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷರಾಗಿದ್ದರು ಈ ವಿಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿತ್ತು, ಇಂದಿರಾಗಾಂಧಿ ಅವರ ರಾಜಕಾರಣದ ಪ್ರೇರಣೆಯೇ ರಾಜ್ಯದಲ್ಲಿ ಅನೇಕ ಗಣ್ಯ ರಾಜಕೀಯ ಮುಖಂಡರಿಗೆ ಅಧಿಕಾರದ ಮುನ್ನೆಲೆಗೆ ಬರಲು ಸಹಾಯವಾಗುತ್ತದೆ .

ಅವರಲ್ಲಿ ಪ್ರಮುಖರಾದ ಆಸ್ಕರ್ ಫರ್ನಾಂಡಿಸ್, ಜನಾರ್ದನ್ ಪೂಜಾರಿ, ದೇವರಾಜ್ ಅರಸ್, ಆರ್.ಗುಂಡೂರಾವ್, ಎಸ್.ಎಂ.ಕೃಷ್ಣ, ಜಾಫರ್ ಷರೀಫ್, ಡಿ.ಬಿ.ಚಂದ್ರೇಗೌಡ, ಧರ್ಮಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಬಿ ಕೆ ಹರಿಪ್ರಸಾದ್ ಇವರೆಲ್ಲ ಸೇರಿದಂತೆ ಇನ್ನು ಅನೇಕ ಪ್ರಭಾವಿ ಮುಖಂಡರು ಇಂದಿರಾಗಾಂಧಿ ಅವರ ಆಡಳಿತದ ಪ್ರಾಬಲ್ಯದ ಸಮಯದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ಸಹಾಯವಾಗುತ್ತದೆ. ಇದು ಕಥೆಯಲ್ಲ ದೇಶದ ರಾಜಕಾರಣದ ಇತಿಹಾಸ.
ಲೇಖನ-ರಘು ಗೌಡ 9916101265

 

- Advertisement -  - Advertisement -  - Advertisement - 
Share This Article
error: Content is protected !!
";