ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ, ಬಡತನ ನಿರ್ಮೂಲನೆ, ಭೂಸುಧಾರಣೆ, ಭಯೋತ್ಪಾದನೆಯ ನಿಗ್ರಹ ಹೀಗೆ ಪ್ರತಿ ಹಂತದಲ್ಲೂ ದಿಟ್ಟ ನಿಲುವು ತಳೆದು, ಭಾರತವನ್ನು ಸ್ವಾಭಿಮಾನಿ, ಸ್ವಾವಲಂಬಿ ರಾಷ್ಟ್ರವಾಗಿಸಲು ಶ್ರಮಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಜಯಂತಿಯಂದು ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇಂದಿರಾಗಾಂಧಿ ಅವರ ಬದುಕು ಮತ್ತು ಸಾಧನೆಗಳು ಇನ್ನಷ್ಟು ತಲೆಮಾರುಗಳ ವರೆಗೆ ಸ್ಪೂರ್ತಿಯ ಸೆಲೆಯಾಗಿರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

