ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮಕ್ಕೆ ಜಿಲ್ಲಾ ಅಧ್ಯಕ್ಷ ರವಿಕುಮಾರ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಚಳ್ಳಕೆರೆ ನಗರದಲ್ಲಿ ಒಳ್ಳೆಯ ವಾತಾವರಣ ಇದ್ದು ಎಲ್ಲರೂ ಸಹ ಒಗ್ಗಟ್ಟು ನಿಂದ ಬಾಳುವ
ಈ ಊರಿನಲ್ಲಿ ನಮ್ಮ ಸಂಘಟನೆಯು ಇನ್ನೂ ಹೆಚ್ಚಿನದಾಗಿ ತಾಲ್ಲೂಕು ಅಧ್ಯಕ್ಷ ಸಯ್ಯದ್ ನಬಿ ರವರ ನೇತೃತ್ವದಲ್ಲಿ ಜೊತೆಗೂಡಿ ಸಂಘಟನೆಯೊಂದಿಗೆ ಬಲ ಪಡಿಸಿ ಮತ್ತು ಹೋರಾಟಗಳು ನ್ಯಾಯದ ಪರ ಧ್ವನಿ ಎತ್ತುವ ಕೆಲಸ ಮಾಡಿ ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಸಯ್ಯದ್ ನಬಿ ಮಾತನಾಡಿ, ನಮ್ಮ ನಾಡು ನುಡಿ ಜಲ ಮತ್ತು ಭಾಷೆಗೆ ಧಕ್ಕೆ ಉಂಟು ಆದರೆ ನಮ್ಮ ಸಂಘಟನೆ ಧ್ವನಿ ಎತ್ತಬೇಕು ಮತ್ತು ಜಾತಿ ಧರ್ಮ ಬೇಧ ಭಾವ ಎಲ್ಲವು ಬದಿಗಿಟ್ಟಿ ಸಂಘಟನೆ ಪರ ಒಗ್ಗಟ್ಟಾಗಿನದಾಗಿ
ಕೆಲಸ ಮಾಡ್ಬೇಕು ಎಂದು ಹೇಳಿದರು.
ಜಿಲ್ಲಾ ಕಮಿಟಿ ರಫೀಕ್, ತಾಲೂಕ್ ಕಮಿಟಿಯ ಬೋರಣ್ಣ, ಗಂಗಾಧರ್, ನಾಝಿಮ್, ಪೈಂಟರ್ ಭಾಷಾ, ಯುವ ಮುಖಂಡ ಮಹಬೂಬ್ ಸುಬಾನಿ, ಗುಂಡು, ಆಫ್ರಿದ್ ಇರ್ಫಾನ್, ಮಲ್ಲಿಕಾರ್ಜುನ ಸ್ವಾಮಿ ಮಂಡಿ ಮಠ, ಗೋವಿಂದಪ್ಪ, ಅಬ್ದುಲ್ಲಾ, ಸಾಖಿಬ್ ಶಾಫಿಲ್ ಅಲಿ, ಸಫ್ಫಾನ್, ಲಡ್ಡು, ಮುಜೀಬ್ ಇನ್ನು ಅನೇಕರು ಇದ್ದರು.

