ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಫ್ಎಆರ್ ಸುಧಾರಣೆ ಚಾರಿತ್ರಿಕ ನಿರ್ಧಾರ-ಕೈಗಾರಿಕಾ ಅಭಿವೃದ್ಧಿ ಮತ್ತಷ್ಟು ‘ಎತ್ತರಕ್ಕೆ’ ಉದ್ಯಮಿಗಳಿಗೆ ಹೂಡಿಕೆ ಭಾರ ಇಳಿಕೆ, ರೈತರಿಗೆ ಭೂಮಿಯ ರಕ್ಷಣೆ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (FAR)ವನ್ನು ಕೈಗಾರಿಕಾ ಸ್ನೇಹಿಯಾಗಿ ಪರಿಷ್ಕರಣೆಗೊಳಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
65% ಬಳಕೆ ಮಿತಿಯನ್ನು 75%ಕ್ಕೆ ಹೆಚ್ಚಿಸಲಾಗಿದೆ. ಉದ್ಯಮಿಗಳಿಗೆ ಅನುಕೂಲವಾಗುವುದರ ಜತೆಗೆ ಕೈಗಾರಿಕೆಗಳಿಗೊಸ್ಕರ ಹೆಚ್ಚು ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು ತಗ್ಗಲಿದೆ. ಪ್ರೀಮಿಯಂ ಕೈಗಾರಿಕಾ ಪ್ಲಾಟ್ ಗಳಲ್ಲಿ FAR ಅನ್ನು 3.25ರಿಂದ 5.2ರವರೆಗೆ ಏರಿಸಲಾಗಿದೆ. ಕಡಿಮೆ ಭೂಮಿಯಲ್ಲಿ ಹೆಚ್ಚು ನಿರ್ಮಾಣ ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಹಳೆಯ ನಿಯಮಗಳಿಂದ ಹೂಡಿಕೆದಾರರಿಗೆ ಎದುರಾದ ಸೆಟ್ ಬ್ಯಾಕ್, ಪಾರ್ಕಿಂಗ್, ಎತ್ತರ ಮಿತಿಗಳ ಅಡಚಣೆಗಳನ್ನು ಗಣನೀಯವಾಗಿ ತಗ್ಗಿಸಲಾಗಿದೆ. 7 ಮೀ. ಮತ್ತು 15 ಮೀ. ಎತ್ತರದ ಕಟ್ಟಡಗಳಿಗೆ ಅಗತ್ಯವಿದ್ದ ಖಾಲಿ ಜಾಗದ ಪ್ರಮಾಣ ಇಳಿಕೆ; ಪಾರ್ಕಿಂಗ್ ಮೀಸಲು ಜಾಗ 5%ರಿಂದ 3%ಕ್ಕೆ ಕಡಿತ; ಸಾಮಾನ್ಯ ಕೈಗಾರಿಕಾ ಪ್ಲಾಟ್ ಗಳಲ್ಲಿ 15% ವಸತಿ ಸೌಲಭ್ಯಕ್ಕೆ ಅವಕಾಶ; 50 ಎಕರೆ ಮೇಲ್ಪಟ್ಟ ಪ್ಲಾಟ್ ಗಳಲ್ಲಿ 10% ವಸತಿ-ವಾಣಿಜ್ಯ ಬಳಕೆಗೆ ಅನುಮತಿ ದೊರೆಯಲಿರುವ ಉದ್ಯಮ ಮತ್ತು ಜೀವನಶೈಲಿಗೆ ಸಮತೋಲನ ಸಾಧಿಸಬಹುದಾಗಿದೆ.
ರಸ್ತೆಯ ಅಗಲ ಆಧರಿಸಿ FAR ಹೆಚ್ಚಳ: 30 ಮೀ. ರಸ್ತೆ ಪಕ್ಕದಲ್ಲಿ 5.2, 24–30 ಮೀ.ಗೆ 4.8, 18–24 ಮೀ.ಗೆ 4, 12–18 ಮೀ.ಗೆ 3.6, 12 ಮೀ.ಗಿಂತ ಕಡಿಮೆ ರಸ್ತೆ ಪ್ರದೇಶಗಳಲ್ಲಿ 2.8ರವರೆಗೆ. ಇದು ವರ್ಟಿಕಲ್ ಡೆವಲಪ್ಮೆಂಟ್ಗೆ ದಾರಿ ತೆರೆದು, ಕಡಿಮೆ ಭೂಸ್ವಾಧೀನ, ಕಡಿಮೆ ವೆಚ್ಚ, ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.
ಈ ಚಾರಿತ್ರಿಕ ಹೆಜ್ಜೆಯಿಂದ ಉದ್ಯಮಿಗಳಿಗೆ ಹೂಡಿಕೆ ಭಾರ ಇಳಿಕೆ, ರೈತರಿಗೆ ಭೂಮಿಯ ರಕ್ಷಣೆ ಹಾಗೂ ಅಭಿವೃದ್ಧಿಪಡಿಸಿದ ಭೂಮಿಯ ರೂಪದಲ್ಲಿ ಲಾಭ-ಇದು ಸುಲಲಿತ ವಹಿವಾಟು ಸಂಸ್ಕೃತಿಯ ಸ್ಪಷ್ಟ ಉದಾಹರಣೆ. ಕರ್ನಾಟಕ ಕೈಗಾರಿಕಾ ವಾತಾವರಣಕ್ಕೆ ಹೊಸ ಎತ್ತರ! ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

