ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೇಮೆಂಟ್ ಪಡೆದು ಪ್ರತಿಭಟಿಸುವ ಕಾಂಗ್ರೆಸ್ಸಿಗರೇ, ಕರ್ನಾಟಕ ಕಾಂಗ್ರೆಸ್ ಮೇಕೆದಾಟಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿರುವುದು ನಿಮ್ಮ ಇಂಡಿ(INDI) ಮೈತ್ರಿಕೂಟದ (@arivalayam) ಡಿಎಂಕೆ ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ತಮಿಳುನಾಡು ಸಿಎಂ ಸ್ಟ್ಯಾಲಿನ್ ಜೊತೆ ಕೈಕುಲುಕಿ, ಫೋಟೋಗೆ ಪೋಸ್ ಕೊಟ್ಟು ಬರುವ ಬದಲು, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರೇ ಮೇಕೆದಾಟಿಗೆ ವಿರೋಧಿಸುತ್ತಿರುವ ಡಿಎಂಕೆ ಸರ್ಕಾರಕ್ಕೆ, ಯೋಜನೆಯ ಬಗ್ಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಮೇಕೆದಾಟು ಯೋಜನೆಗೆ ವಿರೋಧಿಸದೆ, ತಕರಾರು ಮಾಡದೇ ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯುವ ಕೆಲಸವನ್ನು ತುರ್ತಾಗಿ ಮಾಡುವ ಮೂಲಕ ರಾಜ್ಯದ ಜನರ ಪರವಾಗಿ ನಿಮ್ಮ ಬದ್ಧತೆ ಪ್ರದರ್ಶಿಸಿ ಎಂದು ಜೆಡಿಎಸ್ ಸವಾಲ್ ಹಾಕಿದೆ.