ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳು ಸರಣಿ ಸಾವೀಗಿಡಾದಾಗ ನೋವಾಗಲಿಲ್ಲ! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಲಿಂಗಾಯತಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಮಾಡಿಸಿ ಜೈಲಿಗೆ ಹಾಕಿದಾಗಲೂ ನೋವಾಗಲಿಲ್ಲ!. ವಕ್ಫ್ ಹೆಸರಲ್ಲಿ ಉಳುಮೆ ಜಮೀನು ಕಬಳಿಸಿದಾಗ ರೈತರು ಕಣ್ಣೀರಿಟ್ಟರೂ ನೋವಾಗಲಿಲ್ಲ!.
ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗಲೂ ನೋವಾಗಲಿಲ್ಲ!. ಈಗ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ನೋವು ಉಕ್ಕಿ ಉಕ್ಕಿ ಬರುತ್ತಿದೆ!!! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.