ನೀರಿನ ಪೈಪ್ ಲೈನ್ ಗಳಲ್ಲಿ ಸೋರಿಕೆ ಪತ್ತೆಹಚ್ಚುವ ತಂತ್ರಜ್ಞಾನ ಘಟಕ ಆರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು Fido AI ಆಸಕ್ತಿ ಹೊಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಬ್ರಿಟನ್ ಮೂಲದ ಡೀಪ್-ಟೆಕ್ ಸಂಸ್ಥೆಯಾದ Fido AIನ ಅಧ್ಯಕ್ಷೆ ಮತ್ತು ಸಹಸ್ಥಾಪಕಿ ವಿಕ್ಟೋರಿಯಾ ಎಡ್ವರ್ಡ್ಸ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದೆವು.

- Advertisement - 

AI ಮತ್ತು ಧ್ವನಿ ತಂತ್ರಜ್ಞಾನವನ್ನು ಸಂಯೋಜಿಸಿ ನೀರಿನ ಪೈಪ್ ಲೈನ್ ಗಳಲ್ಲಿ  ಉಂಟಾಗುವ ಸೋರಿಕೆಗಳನ್ನು ಪತ್ತೆಹಚ್ಚುವ ಮತ್ತು ಅವುಗಳ ಗಾತ್ರವನ್ನು ಅಳೆಯುವ ಕ್ರಾಂತಿಕಾರಿ ತಂತ್ರಜ್ಞಾನವನ್ನು, Microsoft ಜೊತೆಗೆ, ಅವರು ಅಭಿವೃದ್ಧಿಪಡಿಸಿದ್ದಾರೆ ಎಂದು ಸಚಿವ ಪಾಟೀಲ್ ತಿಳಿಸಿದರು.

ನಮ್ಮ ರಾಜ್ಯದ ಪ್ರತಿಭಾ ಸಂಪತ್ತು ಮತ್ತು ಬಲವಾದ ಸರಬರಾಜು ಜಾಲವನ್ನು ಗಮನಿಸಿ, ಕರ್ನಾಟಕದಲ್ಲಿ ತಯಾರಿಕಾ ಘಟಕ ಸ್ಥಾಪಿಸುವ ಬಗ್ಗೆ Fido AI ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.

- Advertisement - 

ನಮ್ಮ ಕೈಗಾರಿಕಾ ನೀತಿಯಲ್ಲಿ ಇರುವ ಪ್ರೋತ್ಸಾಹಗಳನ್ನು ವಿವರಿಸಿ, ಈ ನೂತನ ತಂತ್ರಜ್ಞಾನವನ್ನು ರಾಜ್ಯಕ್ಕೆ ತರಲು ಮುಂದಿನ ಹಂತಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.

 

Share This Article
error: Content is protected !!
";