ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಂಗಭದ್ರಾ ತಟದ ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಅಣೆಕಟ್ಟಿನ ಎಲ್ಲಾ ಹಳೆಯ ಗೇಟ್‌ಗಳನ್ನು ತೆರವುಗೊಳಿಸಿ, 33 ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಿದೆ ಎಂದು ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಸದ್ಯ 33 ಗೇಟ್‌ಗಳ ಪೈಕಿ 15 ಗೇಟ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, 2026ರ ಏಪ್ರಿಲ್‌ವೇಳೆಗೆ ಕಾಮಗಾರಿ ಮುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದರು.

