ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಮಿಟೊಮೊ ಕಾರ್ಪೊರೇಶನ್ ಜೊತೆಗೆ ಫಲಪ್ರದ ಮಾತುಕತೆ
2,345 ಕೋಟಿ ಹೂಡಿಕೆ ; ಕೊಪ್ಪಳದಲ್ಲಿ ಗ್ರೀನ್‌ಫೀಲ್ಡ್ ಉಕ್ಕು ಘಟಕ! ಸ್ಥಾಪನೆ ಮಾಡಲಾಗುತ್ತದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಸುಮಿಟೊಮೊ ಕಾರ್ಪೊರೇಶನ್ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಈ ದಿನ ಭೇಟಿಯಾಗಿ ಅವರು ಅರ್ಥಪೂರ್ಣ ಚರ್ಚೆ ನಡೆಸಿದರು.
ಅವರು ಬಜಾಜ್ ಸಮೂಹದ ಜಂಟಿ ಸಂಸ್ಥೆಯಾದ ಮುಖಂದ್ ಸುಮಿಯ ಸಹಭಾಗಿತ್ವದಲ್ಲಿ 2,345 ಕೋಟಿ ಹೂಡಿಕೆ ಮಾಡಿ, ಕೊಪ್ಪಳದಲ್ಲಿ ಹಸಿರು ಶಕ್ತಿ ಆಧಾರಿತ ಹೊಸ ಉಕ್ಕು ತಯಾರಿಕಾ ಘಟಕವನ್ನು 2028ರಿಂದ ಕಾರ್ಯಾಚರಣೆಗೆ ತರುವುದಾಗಿ ದೃಢಪಡಿಸಿದರು.
ಶೀಘ್ರದಲ್ಲೇ ಕರ್ನಾಟಕದಲ್ಲಿ ಬಯೋಮಾಸ್ ಶಕ್ತಿ ಘಟಕ ಸ್ಥಾಪನೆಗೆ ಸುಮಿಟೊಮೊ ಸಂಸ್ಥೆ ಒಲವು ವ್ಯಕ್ತಪಡಿಸಿದೆ. ಸುಮಿಟೊಮೊಗೆ ಕರ್ನಾಟಕ ಸರ್ಕಾರ ಎಲ್ಲರೀತಿಯ ಸಹಕಾರವನ್ನು ನೀಡಲಿದೆ ; ಜೊತೆಗೆ ಇತರ ಕ್ಷೇತ್ರಗಳಲ್ಲಿಯೂ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಹಾರ್ದಿಕ ಸ್ವಾಗತವನ್ನು ಸಚಿವ ಎಂ.ಬಿ ಪಾಟೀಲ್ ಕೋರಿದರು.

