ಕೈಮಗ್ಗ ನೇಕಾರರಿಗೆ ವಿಮಾ ಯೋಜನೆ ನೊಂದಣಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಕೈಮಗ್ಗ ನೇಕಾರರಿಗೆ ವಿಮಾ ಯೋಜನೆ ಕಲ್ಪಿಸುವ ಸಲುವಾಗಿ 2024-25ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ ನೊಂದಣಿಯಾಗಿರುವ ಕೈಮಗ್ಗ ನೇಕಾರರನ್ನು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY)  ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ (PMSBY)  ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಅದರಂತೆ 2024-25ನೇ ಸಾಲಿನಲ್ಲಿ ನೇಕಾರರ ಸಮ್ಮಾನ್ ಯೋಜನೆಯಡಿ ನೊಂದಣಿಯಾಗಿರುವ ಕೈಮಗ್ಗ ನೇಕಾರರಲ್ಲಿ 18 ರಿಂದ 50 ವರ್ಷದ ಅರ್ಹ ನೇಕಾರರನ್ನು PMJJBYಯೋಜನೆಯಡಿ ಆಳವಡಿಸುವುದು.

ಹಾಗೂ 18 ರಿಂದ 70 ವರ್ಷದ ಅರ್ಹ ನೇಕಾರರನ್ನು PMSBY ಯೋಜನೆಯಡಿ ಅಳವಡಿಸಿ ಮೇಲಿನಂತೆ ಅರ್ಹ ನೇಕಾರರನ್ನು ಯೋಜನೆಗಳಲ್ಲಿ ಅಳವಡಿಸಿ Annexure-FI,  ಪಿ.ಎಂ.ಜಿ.ಜೆ.ಬಿ.ವೈ/ಪಿಎಂಎಸ್ಬಿವೈ ಯೋಜನೆಯಡಿ ಆಳವಡಿಸಿರುವ ಸ್ವೀಕೃತಿ, ರೂ.436/- ಮತ್ತು ರೂ.20/- ಕಡಿತವಾಗಿರುವ ಬ್ಯಾಂಕ್ ಸ್ಟೇಟ್ಮೆಂಟ್ ಪ್ರತಿ  ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಕಚೇರಿಗೆ ಇದೇ ಏಪ್ರಿಲ್ 31 ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹತಿಗಾಗಿ ದೂರವಾಣಿ ಸಂಖ್ಯೆ 08194-221426 ಗೆ ಕಚೇರಿಯ ವೇಳೆಯಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ತಿಳಿಸಿದ್ದಾರೆ.

Share This Article
error: Content is protected !!
";