ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
SCI ಸೆಮಿಕಂಡಕ್ಟರ್ಸ್: ರಾಜ್ಯದಲ್ಲಿ ಗ್ಲೋಬಲ್ ಕೇಪಬಲಿಟಿ ಸೆಂಟರ್ ಸ್ಥಾಪಿಸಲು ಆಸಕ್ತಿ ಹೊಂದಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
SCI Semiconductors ಇಂಗ್ಲೆಂಡ್ ನಲ್ಲಿರುವ ಅಗ್ರಗಣ್ಯ ಸೆಮಿಕಂಡಕ್ಟರ್ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಬ್ರಿಟನ್ ಪ್ರವಾಸದ ವೇಳೆ ಸಂಸ್ಥೆಯ ಸಿಇಒ ಅವರಾದ ಶ್ರೀ ಹೈಡನ್ ಪೋವಿ (Haydn Povey) ಅವರೊಂದಿಗೆ ಫಲಪ್ರದ ಮಾತು ನಡೆಸಿದೆವು.
ಅವರು ಕರ್ನಾಟಕದಲ್ಲಿ Global Capability Centre- (ಜಾಗತಿಕ ಸಾಮರ್ಥ್ಯ ಕೇಂದ್ರ) ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದರು. ವಿಶ್ವಮಟ್ಟದ ಸೆಮಿಕಂಡಕ್ಟರ್ ಪರಿಸರ, ಪರಿಣಿತ ಮಾನವಶಕ್ತಿ ಮತ್ತು ಪ್ರಗತಿಪರ ನೀತಿಗಳೊಂದಿಗೆ ಕರ್ನಾಟಕ ಅವರ ನವೀನ ಪ್ರಯಾಣಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧ. ಸುರಕ್ಷಿತ–ಹೈಟೆಕ್ ಭವಿಷ್ಯದತ್ತ ಮತ್ತೊಂದು ಭರವಸೆಯ ಹೆಜ್ಜೆ! ಆಗಿದೆ ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟರು.

