ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿಯಾಗಿ ಬೆಳೆದು ನಿಂತಿದೆ. ಬೆಂಗಳೂರಿಗೆ ದೇಶ ವಿದೇಶಗಳಿಂದ ಬಂದು ಹಾಗೂ ಹೋಗುವ ಜನಸಂಖ್ಯೆ ಜಾಸ್ತಿಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಾಯಾಣಿಕರ ಒತ್ತಡ ಜಾಸ್ತಿ ಆಗಿದೆ ಇದರೊಂದಿಗೆ ಏರ್ಪೋರ್ಟ್ ರಸ್ತೆಯ ಒತ್ತಡ ಜಾಸ್ತಿಯಾಗಿದೆ ಈ ಕಾರಣಕ್ಕಾಗಿಯೇ ಬೆಂಗಳೂರಿಗೆ ಹೊಂದಿಕೊಂಡಂತೆ ಇನ್ನೊಂದು ಏರ್ಪೋರ್ಟ್ ಮಾಡಲು ಕೇಂದ್ರ ಸರ್ಕಾರದ ವಿಮಾನಯಾನ ಸಂಸ್ಥೆ ಮುಂದಾಗಿದೆ ಈ ವಿಚಾರದಲ್ಲಿ ಸರ್ಕಾರದ ಜೊತೆ ಚರ್ಚೆ ನಡೆದಿದೆ ಎಂದು ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುದ್ದಿಯಾಗಿದೆ.
ತುಮಕೂರು, ನೆಲಮಂಗಲ, ಕನಕಪುರ ಈ ಮೂರು ಸ್ಥಳಗಳಲ್ಲಿ ಒಂದು ಸ್ಥಳವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಯ್ಕೆಯಾಗಬಹುದು ಎಂದು ಸುದ್ದಿ ಹಬ್ಬಿದೆ.
ನನ್ನ ಅಭಿಪ್ರಾಯದಂತೆ ತುಮಕೂರಿನಿಂದ ಶಿರಾ ಕಡೆ ಹಾದು ಹೋಗುವ ಎನ್ ಎಚ್ 48 ರಸ್ತೆಗೆ ಸಮೀಪದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸೂಕ್ತ ವಿಚಾರವಾಗಿದೆ. ಕಾರಣ ಏನೆಂದರೆ ಮಧ್ಯ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಎಂಟು ಹತ್ತು ಜಿಲ್ಲೆಗಳ ಜನತೆಗೆ ತುಮಕೂರಿನಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡುವುದು ಉತ್ತಮ.
ಕಾರಣ ರಸ್ತೆ ಸಂಚಾರಿ ವ್ಯವಸ್ಥೆ ಸುಲಭವಾಗುತ್ತದೆ. ಒಂದು ವೇಳೆ ಕಾರಣಾಂತರದಿಂದ ತುಮಕೂರಿನಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಅವಕಾಶ ತಪ್ಪಿದರೆ ಎರಡನೇ ಅವಕಾಶ ಇರುವುದು ನೆಲಮಂಗಲ ಎಂದು ಹೇಳಬಹುದು. ಈ ಎರಡರಲ್ಲಿ ಒಂದಕ್ಕೆ ಅವಕಾಶ ಇದೆ. ತುಮಕೂರಿಗೆ ಬಹುಪಾಲು ಪ್ರಥಮ ಅವಕಾಶ ಸಿಗಲಿದೆ ಎಂದು ರಘು ಗೌಡ ತಿಳಿಸಿದ್ದಾರೆ.