ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ 38 ಸಹಾಯಕ ಪ್ರಾಧ್ಯಾಪಕರು, 58 ನಿವಾಸಿ ವೈದ್ಯಾಧಿಕಾರಿಗಳು ಹಾಗೂ 33 ಬೋಧಕರು/ಪ್ರದರ್ಶಕರ ಸೇರಿ 129 ಖಾಲಿ ಹುದ್ದೆಗಳನ್ನು 06 ತಿಂಗಳ ಅವಧಿಗೆ ತಾತ್ಕಾಲಿಕ ಆಧಾರದಡಿ ನೇಮಕಾತಿ ಮಾಡಿಕೊಳ್ಳಲು ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು.
ತಾತ್ಕಾಲಿಕ ಹುದ್ದೆಗಳ ಆಯ್ಕೆಗೆ ಡಿ.30 ರಂದು ಜಿ.ಆರ್.ಹಳ್ಳಿ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಘಂಟೆವರೆಗೆ ಸಂದರ್ಶನ ಪ್ರಕ್ರಿಯೆ ನಡೆಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ 5, ವೈದ್ಯಾಧಿಕಾರಿಗಳ ಹುದ್ದೆಗಳಿಗೆ 20, ಬೋಧಕರು/ಪ್ರದರ್ಶಕರ ಹುದ್ದೆಗಳಿಗೆ 10 ಅಭ್ಯರ್ಥಿಗಳು ಸೇರಿ ಒಟ್ಟು 34 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದಾರೆ. ಎನ್.ಎಂ.ಸಿ ಮಾನದಂಡಗಳನ್ವಯ ಹಾಗೂ ಸಿ.ಎಂ.ಸಿ.ಆರ್.ಐ ಬೈಲಾ ಮತ್ತು ಸಿ.ಅಂಡ್.ಆರ್ ನಿಯಮಗಳಂತೆ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗಿದೆ.
ತಾತ್ಕಾಲಿಕ ಹುದ್ದೆಗಳ ಆಯ್ಕೆ ಸಮಿತಿಯಲ್ಲಿ ನಿರ್ದೇಶಕರು, ನಿರ್ದೇಶಕರು ಹಾಗೂ ಡೀನ್, ಸಿ.ಎಂ.ಸಿ ಮತ್ತು ಆರ್.ಐ ಹಾಗೂ ನೋಡಲ್ ಅಧಿಕಾರಿಗಳು, ಸಹಾಯಕ ಆಡಳಿತಾಧಿಕಾರಿಗಳು, ಪ್ರಾಧ್ಯಾಪಕರುಗಳು ಹಾಗೂ ಎಲ್ಲಾ ವಿಭಾಗದ ನುರಿತ ವೈದ್ಯರು ಸಂದರ್ಶನದಲ್ಲಿ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

