ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮತ್ತು ಬ್ರಿಟನ್ ನಡುವಿನ ಆರ್ಥಿಕ-ತಾಂತ್ರಿಕ ಸಹಕಾರವು ಬಲಪಡುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬ್ರಿಟಿಷ್ ಕಂಪನಿಗಳ ವಿಶ್ವಾಸ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯು ನಮ್ಮ ಕೈಗಾರಿಕಾ ವಲಯದ ಬೆಳವಣಿಗೆಗೆ ಹೊಸ ವೇಗ ನೀಡಿದೆ.
ಈಗಾಗಲೇ ಸಾಧಿಸಿದ ಯಶಸ್ಸನ್ನು ಮತ್ತಷ್ಟು ಮುಂದುವರಿಸಲು ಮತ್ತು ಹೆಚ್ಚುವರಿ ಹೂಡಿಕೆಗಳನ್ನು ಆಕರ್ಷಿಸಲು, ಕೈಗಾರಿಕಾ ಇಲಾಖೆಯ ಉನ್ನತ-ಮಟ್ಟದ ನಿಯೋಗದೊಂದಿಗೆ ಇಂದಿನಿಂದ ಮೂರು ದಿನಗಳ ಬ್ರಿಟನ್ ಭೇಟಿಯನ್ನು ಕೈಗೊಂಡಿದ್ದೇನೆ.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

