ಸುವರ್ಣ ಮಹೋತ್ಸವ ಪ್ರಶಸ್ತಿಗೆ ಮನವಿಗಳ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-50 ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಜನ ಪುರುಷರು ಮತ್ತು 50 ಜನ ಮಹಿಳೆಯರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.

- Advertisement - 

ಈ ಸಂಬಂಧ ಕಲೆ, ಸಾಹಿತ್ಯ ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ 10 ರಿಂದ 15 ವರ್ಷಗಳ ಗಣನೀಯ ಸೇವೆ ಸಲ್ಲಿಸಿರುವ 50 ವರ್ಷ ಮೇಲ್ಪಟ್ಟ ಸಾಧಕರು ತಮ್ಮ ಹೆಸರು ವಿಳಾಸ ಜನ್ಮ ದಿನಾಂಕ ಸಾಧನೆಯ

- Advertisement - 

ಕುರಿತು 500 ಶಬ್ದಗಳ ಸಂಕ್ಷಿಪ್ತ ಕಿರು ಪರಿಚಯದೊಂದಿಗೆ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ ಜೆ.ಸಿ. ರಸ್ತೆ, ಬೆಂಗಳೂರು ರವರಿಗೆ ಅಕ್ಟೋಬರ್ 05 ರ ಒಳಗಾಗಿ ಮನವಿಗಳನ್ನು  ಸಲ್ಲಿಸಬಹುದಾಗಿದೆ ಅಂದೇ ಕೊನೆಯ ದಿನಾಂಕವಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";