ರಕ್ತದಾನಿಗಳಿಂದ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಜೂನ್ 14ರಂದು ನಡೆಯುವ ವಿಶ್ವ ರಕ್ತದಾನಿಗಳ ದಿನಾಚರಣೆ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕನಿಷ್ಟ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.

- Advertisement - 

ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ, ಇನ್ನೊಬ್ಬರ ಅಮೂಲ್ಯವಾದ ಜೀವ ಉಳಿಸಬೇಕೆಂಬ ಧೈಯ ಇಟ್ಟುಕೊಂಡು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ರಕ್ತದಾನಿಗಳಿಗೆ ಗೌರವ ಮತ್ತು ಹೃತ್ತೂರ್ವಕ ವಂದನೆ ಸಲ್ಲಿಸುವ ಮುಖ್ಯ ಉದ್ದೇಶದಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಬೆಂಗಳೂರು ಅವರು ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನಾಚರಣೆ ದಿನದಂದು ರಕ್ತದಾನಿಗಳನ್ನು ಗೌರವಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಿಂದ ಒಬ್ಬ ರಕ್ತದಾನಿಯನ್ನು ಗೌರವಿಸಲಾಗುತ್ತದೆ.

- Advertisement - 

ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯಿಂದ ಕನಿಷ್ಠ 25 ಬಾರಿ ಮೇಲ್ಪಟ್ಟು ರಕ್ತದಾನ ಮಾಡಿರುವ ಒಬ್ಬ ರಕ್ತದಾನಿಯನ್ನು ನಾವುಗಳು ರೆಡ್ ಕ್ರಾಸ್ ರಾಜ್ಯ ಶಾಖೆಗೆ ಕಳುಹಿಸ ಬೇಕಾಗಿರುತ್ತದೆ. ರಕ್ತದಾನಿ ಅಥವಾ ಅವರಿಗೆ ಸಂಬಂಧಿಸಿದವರು ರಕ್ತದಾನಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳ ದಾಖಲೆಯ ಪ್ರತಿಯೊಂದಿಗೆ ರಕ್ತದಾನಿಯ ವಿಳಾಸ ಹಾಗೂ

ಮೊಬೈಲ್ ಸಂಖ್ಯೆಯ ವಿವರವನ್ನು ಇದೇ ಮೇ 27ರೊಳಗೆ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಚಿತ್ರದುರ್ಗ, ಜಿಲ್ಲಾ ಶಾಖೆ ಕಚೇರಿ, ಸ್ವಾತಂತ್ರ್ಯ ಹೋರಾಟಗಾರರ ಭವನ, ಸ್ಪೇಡಿಯಂ ರಸ್ತೆ, ಚಿತ್ರದುರ್ಗ ಮೊಬೈಲ್7899187128 ಸಂಪರ್ಕಿಸಬೇಕು ಎಂದು ಭಾರತೀಯ ರೆಡ್ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";