ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸಂಬಂಧ ಪರಿಶಿಷ್ಠ ಜಾತಿ ವಿದ್ಯಾರ್ಥಿಗಳು ಸಮಾಜ ಇಲಾಖೆ ವೆಬ್‌ಸೈಟ್‌ನಡಿ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. 2025-2026ನೇ ಸಾಲಿನಿಂದ ಕೇಂದ್ರ ಪುರಸ್ಕೃತ ವಿದ್ಯಾರ್ಥಿವೇತನ

- Advertisement - 

ಕಾರ್ಯಕ್ರಮಗಳಲ್ಲಿ Aadhar Based Biometric Authentication and E-Kyc ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ನ್ನು ಎನ್.ಪಿ.ಸಿ.ಐ ನಲ್ಲಿ ಸೀಡಿಂಗ್ ಮಾಡಿಸಬೇಕು. ಗ್ರಾಮ ಒನ್, ಕರ್ನಾಟಕ ಒನ್, ಕೇಂದ್ರಗಳಲ್ಲಿ ಹಾಗೂ ಚಳ್ಳಕೆರೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಸಕಾಲದಲ್ಲಿ ಇಕೆವೈಸಿ ಮಾಡಿಸುವಂತೆ ಪ್ರಕಟಣೆ ತಿಳಿಸಿದೆ.

- Advertisement - 

- Advertisement - 

Share This Article
error: Content is protected !!
";