ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಿರಿಯೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಲ್ಯಾಟೆರಲ್ ಎಂಟ್ರಿ ಮುಖಾಂತರ ವಿವಿಧ ಕೋರ್ಸ್‍ಗಳ ಪ್ರವೇಶಾತಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಿರಿಯೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಐ.ಟಿ.ಐ/ವಿಜ್ಞಾನ ದ್ವಿತೀಯ ಪಿ.ಯು.ಸಿ (ವಿಜ್ಞಾನ) ಮತ್ತು ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳಲ್ಲಿ) ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ದ್ವಿತೀಯ ವರ್ಷದ ಡಿಪ್ಲೋಮಾ ವ್ಯಾಸಂಗಕ್ಕೆ ಅವಕಾಶವಿದ್ದು,
ನೇರವಾಗಿ ಎರಡನೆ ವರ್ಷದ ಡಿಪ್ಲೋಮಾ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ, ಮೂಲ ಐಟಿಐ/ ದ್ವಿತೀಯ ಪಿಯು ಅಂಕಪಟ್ಟಿ, ಮೂಲ ವರ್ಗಾವಣೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಕನ್ನಡ ಮಾಧ್ಯಮ ವ್ಯಾಸಂಗ, ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಪ್ರಮಾಣ ಪತ್ರಗಳ ಜೊತೆಗೆ ನೇರವಾಗಿ ಸಂಸ್ಥೆಗೆ ಹಾಜರಾಗಿ, ಮೆರಿಟ್ ರೋಸ್ಟರ್ ಆಧಾರಿತ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಜೂನ್ 14 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 9900337587 ಅಥವಾ 9482787542 ಕ್ಕೆ ಸಂಪರ್ಕಿಸಬೇಕೆಂದು ಹಿರಿಯೂರು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.