ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಂತ್ರಿಕ ಶಿಕ್ಷಣ ಇಲಾಖೆಯ 2025-26ನೇ ಸಾಲಿಗೆ ರಾಜ್ಯದ ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿನ ಅನುದಾನಿತ ಕೋರ್ಸುಗಳಿಗೆ ಹಾಗೂ ಖಾಸಗಿ ಪಾಲಿಟೆಕ್ನಿಕ್‍ಗಳು ಸ್ವ-ಇಚ್ಛೆಯಿಂದ ಆದ್ಯರ್ಪಣೆ ಮಾಡಿರುವ ಸೀಟುಗಳಿಗೆ ಎರಡು ವಿಧಾನದಲ್ಲಿ ಮೆರಿಟ್ ಆಧಾರಿತ ಆನ್ ಲೈನ್ ಮತ್ತು ಮೆರಿಟ್ ಆಧಾರಿತ ಆಫ್‍ಲೈನ್ ಮೂಲಕ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ / ತತ್ಸಮಾನ ಪರೀಕ್ಷೆಯಲ್ಲಿ ಉತ್ರ್ತೀಣರಾಗಿ ಒಟ್ಟಾರೆ ಶೇ.35 ಅಂಕಗಳನ್ನು ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ www.dtetech.karnataka.gov.in/kartechnical ನಿಂದ ಪಡೆದು, 2025ನೇ ಮೇ 15 ಒಳಗಾಗಿ ಸಲ್ಲಿಸುವುದು.
ಮೆರಿಟ್ ಆಧಾರಿತ ಆನ್‍ಲೈನ್ ಪ್ರವೇಶಾತಿ ಪ್ರಕ್ರಿಯೆ:
ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‍ಗಳ (ಅನುದಾನಿತ ಕೋರ್ಸುಗಳು) ಕೋರ್ಸುಗಳಿಗೆ ಹಾಗೂ ಖಾಸಗಿ ಪಾಲಿಟೆಕ್ನಿಕ್‍ಗಳು ಸ್ವ-ಇಚ್ಛೆಯಿಂದ ಸರ್ಕಾರಕ್ಕೆ ಆಧ್ಯರ್ಪಣೆ ಮಾಡಿರುವ ಕೋರ್ಸುಗಳಿಗೆ (ಎಸ್.ಎನ್.ಕ್ಯೂ ಸೀಟುಗಳು ಸೇರಿ) ಮಾತ್ರ ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಛಾನುಸಾರ ಆದ್ಯತಾ ಪಟ್ಟಿಯಲ್ಲಿ (Priority Sheet) ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿಬೇಕು. ಒಂದೇ ಅರ್ಜಿಯನ್ನು ಸಮೀಪ ಇರುವ ಯಾವುದೇ ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಿಗೆ ಸಲ್ಲಿಸುವುದು. ಅಭ್ಯರ್ಥಿಗಳು ನೀಡುವ ಆಧ್ಯತೆಯನುಸಾರವಾಗಿ ಮೆರಿಟ್ ಹಾಗೂ ರೋಷ್ಟರ್‍ನುಗುಣವಾಗಿ ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಮೆರಿಟ್ ಹಾಗೂ ರೋಷ್ಟರ್‍ಗೆ ಅನುಗುಣವಾಗಿ ಆಫ್‍ಲೈನ್ ಪ್ರವೇಶಾತಿ ಪ್ರಕ್ರಿಯೆ:
ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‍ಗಳ (ಅನುದಾನಿತ ಕೋರ್ಸುಗಳು) ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ಮೆರಿಟ್ ಹಾಗೂ ರೋಷ್ಠರ್‍ಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರ ಹಂತದಲ್ಲಿ ಆಫ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್‍ಗಳಿಂದ ಕಛೇರಿ ವೇಳೆಯಲ್ಲಿ ಪಡೆಯಬಹುದು ಅಥವಾ ತಾಂತ್ರಿಕ ಇಲಾಖೆಯ ಅಧಿಕೃತ ಜಾಲತಾಣ www.dtek.karnataka.gov.in or www.dtetech.karnataka.gov.in/kartechnical ಗೆ ಸಂಪರ್ಕಿಸಬಹುದಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.