ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
೨೦೨೫-೨೬ನೇ ಸಾಲಿಗೆ ಕುಶಲಕರ್ಮಿ ತರಬೇತಿ ಯೋಜನೆಯಡಿ ಎನ್‌ಸಿವಿಟಿ ಸಂಯೋಜನೆ ಪಡೆದಿರುವ ಎನ್.ಆರ್.ಪುರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಭ್ಯವಿರುವ ಎರಡು ವರ್ಷ ಅವಧಿಯ ವೃತ್ತಿಗಳಿಗೆ ಅಂತಿಮ ಸುತ್ತಿನ ಪ್ರವೇಶಾತಿ ನಂತರ ಹೊಸದಾಗಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರುವ ಅರ್ಹ ಆಸಕ್ತ ಅಭ್ಯರ್ಥಿಗಳು ಆಗಸ್ಟ್ ೩೧ರೊಳಗೆ ನರಸಿಂಹರಾಜಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿಗೆ ಅರ್ಜಿ ಪಡೆದು ತಮ್ಮ ವಿವರಗಳನ್ನು ಸಲ್ಲಿಸಬಹುದು.
ಈ ಸಂಸ್ಥೆಯಲ್ಲಿ ಬಾಕಿ ಇರುವ ವೃತ್ತಿಗಳ ವಿವರ ಇಂತಿವೆ: ಎಲೆಕ್ಟ್ರೀಷಿಯನ್ ೧೮ ಸ್ಥಾನಗಳು, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹಾಗೂ ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ತಲಾ ೧೭ ಸ್ಥಾನಗಳಿವೆ. ಹೆಚ್ಚಿನ ಮಾಹಿತಿಗೆ ನರಸಿಂಹರಾಜಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ(೭೪೧೧೮೬೯೭೩೬, ೮೬೬೦೬೭೧೩೫೧, ೯೪೪೮೨೦೬೯೭೫)ರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.