ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಇನೋವೇಶನ್ ಸೆಂಟರ್ ಸ್ಥಾಪಿಸುವಂತೆ ಎಲಿಮೆಂಟ್ ಸಿಕ್ಸ್ ಗೆ ಆಹ್ವಾನ! ನೀಡಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದರು.
ಯುಕೆ ಪ್ರವಾಸ ಯಶಸ್ವಿಯಾಗಿ ಮುಂದುವರೆದಿದೆ. ಸೆಮಿಕಂಡಕ್ಟರ್ ಮತ್ತು ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಸಿಂಥೆಟಿಕ್ ಡೈಮಂಡ್ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವ ಜಾಗತಿಕ ಮುಂಚೂಣಿ ಸಂಸ್ಥೆಯಾದ Element Six ತಂಡವನ್ನು ಭೇಟಿ ಮಾಡಿದೆವು.
ಸೆಮಿಕಂಡಕ್ಟರ್, ಏರೋಸ್ಪೇಸ್ ಹಾಗೂ ರಕ್ಷಣಾ ಅನ್ವಯಿಕೆಗಳಿಗೆ ಒತ್ತು ನೀಡುವ ಇನೋವೇಶನ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಅವರಿಗೆ ಆಹ್ವಾನ ನೀಡಿದೆವು ಎಂದು ಸಚಿವರು ತಿಳಿಸಿದರು.
ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಒಪ್ಪಿರುವುದು ಸಂತೋಷ ತಂದಿದೆ. ನವೀನತೆಯ ಪಾಲುದಾರರನ್ನು ಆಕರ್ಷಿಸುತ್ತಿರುವ ರಾಜ್ಯವಾಗಿ ಕರ್ನಾಟಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

