ವಿವಿ ಸಾಗರ ಕುರಿತು ಕವಿತೆಗಳಿಗೆ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಶ್ವ ಕನ್ನಡ ಕಲಾ ಸಂಸ್ಥೆ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ ಹಾಗೂ ವಿಜಯ ಕಿರಣ ಪರಿಸರ ಜಾಗೃತಿ ಸಂಸ್ಥೆಗಳ ಸಹಯೋಗದಲ್ಲಿ  ಜೀವನಾಡಿ ವಾಣಿವಿಲಾಸ ಸಾಗರ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೆಂಪರಾಜಮ್ಮಣ್ಣಿ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ರೈತರ ಜೀವನಾಡಿ ವೇದಾವತಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ವನ್ನು ನವೆಂಬರ್ 16ರಂದು ಬೆಳಿಗ್ಗೆ 10:30ಗಂಟೆಗೆ ಹಾರನ ಕಣಿವೆ ರಂಗಪ್ಪ ದೇವಸ್ಥಾನದ ಹತ್ತಿರ ಹಮ್ಮಿಕೊಳ್ಳಲಾಗಿದೆ.

- Advertisement - 

ಆಸಕ್ತ ಕವಿಗಳು ನವೆಂಬರ್ 10ರ ಒಳಗೆ ತಮ್ಮ ಕವಿತೆಗಳನ್ನು ವಿನಾಯಕ ಆರ್ ಜಿ 9945606662, ಡಾ ನವೀನ್ ಸಜ್ಜನ್ 8971002744 ಈ ದೂರವಾಣಿ ಸಂಖ್ಯೆಗಳಿಗೆ ವಾಟ್ಸಪ್ ಮಾಡುವ ಮೂಲಕ ಹೆಸರು ನೋಂದಾಯಿಸಲು ಕೋರಲಾಗಿದೆ.

ಕವಿಗೋಷ್ಠಿಯಲ್ಲಿ ಭಾಗವಹಿಸಲು ನಿಯಮಗಳು ಹೀಗಿವೆ-
ಸ್ವರಚಿತ ಕವನ ವಾಚಿಸಬೇಕು. ಕವಿತೆಯ ವಸ್ತು ಮಾರಿಕಣಿವೆ ಜಲಾಶಯ  ಆಗಿರಲಿ. ಸಾಲುಗಳ ಮಿತಿ ಕನಿಷ್ಠ
24.

- Advertisement - 

ಭಾಗವಹಿಸಿದ ಎಲ್ಲಾ ಕವಿಗಳಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಸಂಘಟಕರಾದ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಈ. ರವೀಶ, ಡಾ.ಮಹೇಶ್ ಕಡ್ಲೆಗುದ್ದು ಹಾಗೂ ಕೊಲ್ಲೂರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share This Article
error: Content is protected !!
";