ಡಿಸೆಂಬರ್-28 ರಂದು ತಡರಾತ್ರಿ 11:45ಕ್ಕೆ ಸ್ಮಶಾನದಲ್ಲಿ ಕವಿಗೋಷ್ಠಿ ಕವಿತೆಗೆ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಕನ್ನಡ ಕಲಾ ಸಂಸ್ಥೆಯ ಕೇಂದ್ರ ಸಮಿತಿ ಹಿರಿಯೂರು ವತಿಯಿಂದ ಹಾಗೂ ಕುವೆಂಪು ಗೆಳೆಯರ ಬಳಗ ಹಿರಿಯೂರು ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್-
29 ರಂದು ಆಚರಿಸಲಾಗುತ್ತದೆ ಮತ್ತು ಈ ದಿನವನ್ನು ವಿಶ್ವ ಮಾನವ ದಿನ ಎಂದು ಕರೆಯಲಾಗುತ್ತದೆ.

ಈ ದಿನವನ್ನು ಸಾಹಿತ್ಯ ಮತ್ತು ಚಿಂತನೆಗಳನ್ನು ಸ್ಮರಿಸಲು ಡಿಸೆಂಬರ್-28 ರಂದು ತಡರಾತ್ರಿ  11:45ಕ್ಕೆ ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಸಮೀಪದ ಸ್ಮಶಾನದಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ.

- Advertisement - 

ಈ ಗೋಷ್ಠಿಗೆ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯುಳ್ಳ ಆಸಕ್ತರು ತಮ್ಮ ಹೆಸರನ್ನು ದಿನಾಂಕ 15-12-2025ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ವಿಶೇಷ ಸೂಚನೆಗಳು :
1.ಸ್ಮಶಾನವೆಂಬ ಭಯ ಇರಬಾರದು
2. ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯುಳ್ಳವರಾಗಿರಬೇಕು.
3.ಒತ್ತಾಯಪೂರ್ವಕವಾದ ಆಹ್ವಾನ ಇರುವುದಿಲ್ಲ.
4. ಸ್ಮಶಾನ ಎಂದರೆ ಸೂತಕ ಎಂಬ ಪೂರ್ವಗ್ರಹ ಪೀಡನೆ ಇರಬಾರದು.

- Advertisement - 
  1. ಕಾರ್ಯಕ್ರಮಕ್ಕೆ ಬಂದು ಹೋದ ನಂತರ ಕಾಕತಾಳೀಯವೆಂಬಂತೆ ಏನಾದರು ತೊಂದರೆಗಳಾದರೆ ಅದಕ್ಕೆ ಕಾರ್ಯಕ್ರಮದ ಆಯೋಜಕರನ್ನು ದೂಷಿಸಬಾರದು. ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೆ ಕಾರಣ ಎಂದು ಕೊಳ್ಳಬಾರದು.
    6. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.
    7. ಹಿರಿಯೂರು ಮತ್ತು ಹಿರಿಯೂರು ಸುತ್ತಮುತ್ತಲಿನ ಕವಿಗಳಿಗೆ ಆದ್ಯತೆ
    ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಿಕೊಳ್ಳಲು ವಿಶ್ವ ಕನ್ನಡ ಕಲಾ ಸಂಸ್ಥೆ ಗೌರವ ಅಧ್ಯಕ್ಷ ಡಾ.ಎಸ್.ಎಚ್ ಶಫಿವುಲ್ಲಾ
    8867435662, ವಿಶ್ವ ಕನ್ನಡ ಕಲಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಈ ರವೀಶ ಅಕ್ಕರ ಇವರನ್ನ ಸಂಪರ್ಕಿಸಬಹುದಾಗಿದೆ.

 

Share This Article
error: Content is protected !!
";