ಹೊಳಲ್ಕೆರೆ ನ್ಯಾಯಾಲಯ ಆವರಣದಲ್ಲಿ ಕ್ಯಾಂಟೀನ್ ನಡೆಸಲು ದರಪಟ್ಟಿ ಆಹ್ವಾನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಜಿಲ್ಲೆಯ ಹೊಳಲ್ಕೆರೆಯಲ್ಲಿನ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ನಡೆಸಲು ಆಸಕ್ತ ಮತ್ತು ಅರ್ಹರಿಂದ ದರಪಟ್ಟಿ ಆಹ್ವಾನಿಸಲಾಗಿದೆ.

     ಹೊಳಲ್ಕೆರೆಯ ನ್ಯಾಯಾಲಯ ಆವರಣದಲ್ಲಿ ಕ್ಯಾಂಟೀನ್ ನಡೆಸಲು ಬಯಸುವ ಆಸಕ್ತರು, ತಾವು ತಯಾರಿಸುವ ಆಹಾರಗಳು, ಪ್ರಮಾಣ, ಪೂರೈಕೆಗೆ ವಿಧಿಸುವ ದರ ಮುಂತಾದ ವಿವರಗಳನ್ನು ನಮೂದಿಸಿ, ದರಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಾರ್ಯಾಲಯ,

- Advertisement - 

ಚಿತ್ರದುರ್ಗ ಇವರಿಗೆ ಮಾರ್ಚ್ 10 ರಂದು ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬೇಕು.  ದರಪಟ್ಟಿ ಲಕೋಟೆಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿ ಅವರ ಸಮಕ್ಷಮದಲ್ಲಿ ಮಾ. 12 ರಂದು ಸಂಜೆ 05 ಗಂಟೆಗೆ ತೆರೆಯಲಾಗುವುದು.  ಹೆಚ್ಚಿನ ವಿವರಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಾರ್ಯಾಲಯದಿಂದ ಪಡೆಯಬಹುದಾಗಿದೆ.

- Advertisement - 
Share This Article
error: Content is protected !!
";