ಎಸ್ಎಸ್ಎಲ್ ಸಿ 2026ರ ಪರೀಕ್ಷೆ-1ಕ್ಕೆ ನೋಂದಾಯಿಸಲು ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ / ಕಾಲೇಜುಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಶಾಲೆಗಳ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ತಮ್ಮ ಶಾಲೆಕಾಲೇಜುಗಳಿಂದ 2026 ಪರೀಕ್ಷೆ1 ಕ್ಕೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು (CCERF) Regular  ವಿದ್ಯಾರ್ಥಿಗಳ ವಿವರಗಳನ್ನು ಮಂಡಳಿಯ  https://kseab.karnataka.gov.in   ಜಾಲತಾಣದ ಶಾಲಾ ಲಾಗಿನ್ / ಕಾಲೇಜು ಲಾಗಿನ್ ಮೂಲಕ 08ನೇ ಅಕ್ಟೋಬರ್ 2025 ರಿಂದ ಅಪ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

- Advertisement - 

ಮಂಡಳಿ ಜಾಲತಾಣದ ಶಾಲಾ ಲಾಗಿನ್ / ಕಾಲೇಜು ಲಾಗಿನ್ ಮೂಲಕ https://kseab.karnataka.gov.in  ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು 08ನೇ ಅಕ್ಟೋಬರ್ 2025 ರಿಂದ ಪ್ರಾರಂಭಿಸಿದ್ದು, 31ನೇ ಅಕ್ಟೋಬರ್ 2025 ಕೊನೆಯ ದಿನವಾಗಿದೆ.

ಮಂಡಳಿ ಜಾಲತಾಣದ ಶಾಲಾ ಲಾಗಿನ್ / ಕಾಲೇಜು ಲಾಗಿನ್ ಮೂಲಕ https://kseab.karnataka.gov.in  ವಿದ್ಯಾರ್ಥಿಗಳ ಪರೀಕ್ಷ ಶುಲ್ಕದ ಚಲನ್ ಮುದ್ರಿಸಿ ಕೊಳ್ಳಲು ನವೆಂಬರ್ 3 ರಿಂದ ನವೆಂಬರ್ 7, 2025 ರವರೆಗೆ ನಿಗಧಿಪಡಿಸಲಾಗಿದೆ. ಚಲನ್ ಮುದ್ರಿಸಿಕೊಂಡು ಬ್ಯಾಂಕ್ಗೆ ಜಮೆಮಾಡಲು ನವೆಂಬರ್ 3 ರಿಂದ ನವೆಂಬರ್ 11 2025 ವರೆಗೆ ಅವಕಾಶ ಕಲ್ಪಿಸಲಾಗಿದೆ.

- Advertisement - 

ಪ್ರಸ್ತುತ ಸಾಲಿನಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಯನ್ನು ನೇರವಾಗಿ ಅಭ್ಯರ್ಥಿಗಳೇ ಮಂಡಲಿ ಜಾಲತಾಣದಲ್ಲಿ  ನೊಂದಾಯಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗುತ್ತದೆ. ಕುರಿತು ಪ್ರತ್ಯೆಕ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧ್ಯಕ್ಷರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";