ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೈಸೂರಿನ ಸಿಎಸ್ಐಆರ್ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ 07 ಅರ್ಜಿ ಸಲ್ಲಿಸಲು ಕೊನೆಯ ದಿನ.

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಪಿಯುಸಿ ತತ್ಸಮಾನ ಮತ್ತು ಸ್ಟೇನೋ ಕನ್ನಡ ಮತ್ತು ಇಂಗ್ಲಿಷ್ ಸಿನಿಯರ್ ವೇಗವಾಗಿ ಟೈಪಿಂಗ್, ಕಂಪ್ಯೂಟರ್  ಜ್ಞಾನ ತಾಂತ್ರಿಕ ಸಹಾಯಕ ಹುದ್ದೆಗೆ ಬಿಎಸ್ಸಿ, ಡಿಪ್ಲೊಮಾದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು.

  ಅರ್ಜಿಯ ಸಲ್ಲಿಸಲು 18 ರಿಂದ 28 ವರ್ಷ ವಯೋಮಿತಿ ಒಳಗೆ ಇರಬೇಕು. ಅರ್ಜಿಯ ಜೊತೆಗೆ ಅಂಕಪಟ್ಟಿಗಳು, ಜಾತಿ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ಆರ್ಮಡ್ ಪರ್ಸನಲ್ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಒಂದು ವರ್ಷದ ಕಂಪ್ಯೂಟರ್ ಪ್ರಮಾಣ ಪತ್ರ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು https://cftri.res.inhttps://recruitment.cftri.res.in  ವೆಬ್ಸೈಟ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಚಿತ್ರದುರ್ಗ ದೂರವಾಣಿ ಸಂಖ್ಯೆ 9945587060,7022459064, 7019755147 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

 

Share This Article
error: Content is protected !!
";