ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
SAPLabs ದೇವನಹಳ್ಳಿ ಕ್ಯಾಂಪಸ್ ಉದ್ಘಾಟನೆಗೆ ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರನ್ನ ಆಹ್ವಾನಿಸಿದರು.
ಸ್ಯಾಪ್ ಲ್ಯಾಬ್ಸ್ ಇನೊವೇಷನ್ ಪಾರ್ಕ್ ನ ಉನ್ನತಮಟ್ಟದ ಪ್ರತಿನಿಧಿಗಳು ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ, ಆಗಸ್ಟ್ 5ರ ಮಂಗಳವಾರ ದೇವನಹಳ್ಳಿಯಲ್ಲಿ ಜರುಗಲಿರುವ ನೂತನ ಇನೊವೇಷನ್ ಪಾರ್ಕ್ ಉದ್ಘಾಟನೆಗೆ ಆಹ್ವಾನಿಸಿದರು.
SAP ಲ್ಯಾಬ್ಸ್ ಇಂಡಿಯಾ, SAPನ ವೇಗವಾಗಿ ಬೆಳೆಯುತ್ತಿರುವ ಅಂಗಸಂಸ್ಥೆಯಾಗಿದ್ದು, ವಿಶ್ವದರ್ಜೆಯ ಟೆಕ್ ಪರಿಹಾರಗಳನ್ನು ಒದಗಿಸುತ್ತಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಬೃಹತ್ ಸಂಶೋಧನಾ ಕೇಂದ್ರ ಹೊಂದಿರುವ SAPLabs ಇದೀಗ ದೇವನಹಳ್ಳಿಯ 41 ಎಕರೆಯ ವಿಸ್ತೀರ್ಣದಲ್ಲಿ ತನ್ನ ನೂತನ ಕ್ಯಾಂಪಸ್ ಆರಂಭಿಸುತ್ತಿರುವುದು ಹರ್ಷ ತರಿಸಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ಕರ್ನಾಟಕವು ಉದ್ಯಮಸ್ನೇಹಿ ರಾಜ್ಯವಾಗಿದ್ದು, ಇಲ್ಲಿನ ಕೈಗಾರಿಕಾ ನೀತಿಗಳ ಮೂಲಕ ದೇಶೀಯ ಮತ್ತು ಜಾಗತಿಕ ಉದ್ಯಮಿಗಳನ್ನು ಆಕರ್ಷಿಸುತ್ತಲೇ ಇದೆ. ಉದ್ಯಮ ಸ್ಥಾಪನೆ, ವಿಸ್ತರಣೆ ಮೂಲಕ ರಾಜ್ಯದ ಒಟ್ಟಾರೆ ಅಭಿವೃದ್ಧಿಗೂ ಅಮೂಲ್ಯ ಕೊಡುಗೆ ನೀಡುತ್ತಿವೆ.
ದೇವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ SAP ಕ್ಯಾಂಪಸ್ ನಲ್ಲಿ ಮೊದಲ ಹಂತದಲ್ಲಿ 4,200 ಉದ್ಯೋಗಗಳು ಲಭ್ಯವಾಗಲಿದ್ದು, ಭವಿಷ್ಯದಲ್ಲಿ ಈ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.
ಇದು ನಾವೀನ್ಯತೆಗೆ ಬದ್ಧವಾದ ರಾಜ್ಯದ ಕನಸುಗಳನ್ನು ನನಸು ಮಾಡುವತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟರು.

