ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೈನ ಬಸದಿ ಹಾಗೂ ಸಿಖ್ ಗುರುದ್ವಾರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಧಾನ ಹಾಗೂ ಸಹಾಯಕ ಅರ್ಚಕರು ಅಥವಾ ಗ್ರಂಥಿಗಳಿಗೆ ಮಾಸಿಕ ಗೌರವ ಧನ ನೀಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಜೈನ್ ಬಸದಿ ಹಾಗೂ ಸಿಖ್ ಗುರುದ್ವಾರಗಳು ಕಾಯ್ದೆ ಅನುಸಾರ ನೋಂದಣಿಯಾಗಿರಬೇಕು. ಅರ್ಜಿ ಸಲ್ಲಿಸುವವರು ಆಡಳಿತ ಮಂಡಳಿಗಳಿAದ ಅರ್ಚಕರು ಅಥವಾ ಗ್ರಂಥಿಗಳಾಗಿ ಆಯ್ಕೆಯಾಗಿರುಬೇಕು. ಸೂಕ್ತ ಧಾರ್ಮಿಕ ವಿದ್ಯಾರ್ಹತೆ ಹೊಂದಿರಬೇಕು.
ಜಿಲ್ಲಾ ಹಾಗೂ ತಾಲ್ಲೂಕು ಮಾಹಿತಿ ಕೇಂದ್ರಗಳಿAದ ಅರ್ಜಿ ನಮೂನೆಗಳನ್ನು ಪಡೆಯಬಹುದು. ಆಧಾರ್ ಕಾರ್ಡ್, ಭಾವಚಿತ್ರ, ವಾಸ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ ಹಾಗೂ ಆಡಳಿತ ಮಂಡಳಿಯಿAದ ಕರ್ತವ್ಯದ ಹಾಜರಾತಿ ಹಾಗೂ ಸೇವಾ ಧೃಡೀಕರಣ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 30ರ ಒಳಗೆ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯ, ಶ್ರೀರಾಮ ಕಾಂಪ್ಲೆಕ್ಸ್ನಲ್ಲಿನ ಕಚೇರಿಗೆ ಸಲ್ಲಿಸುವಂತೆ ಅಲ್ಪಸಂಖ್ಯಾತರ ಜಿಲ್ಲಾಧಿಕಾರಿ ಜಿ.ರೇಖಾ ತಿಳಿಸಿದ್ದಾರೆ.