ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ನಗರದ 7 ನೇ ಎಸಿಎಂಎಂ ಕೋರ್ಟಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ರೂಪಾ ಅವರು ನೀಡಿರುವ ಖಾಸಗಿ ದೂರಿನ ನಂತರ ಕೋರ್ಟ್ ರೋಹಿಣಿ ಅವರಿಗೆ ನೋಟೀಸ್ ಜಾರಿಮಾಡಿದೆ. ದೂರಿನ ಅನ್ವಯ ರೋಹಿಣಿ, ಫೆಬ್ರುವರಿ 19, 2023 ರಂದು ರೂಪಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ನಂತರ ಅದನ್ನು ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಶೇರ್ ಕೂಡ ಮಾಡಿದ್ದಾರೆ.
ಅವರ ಹೇಳಿಕೆಯಿಂದ ಕೇವಲ ತಾನು ಮಾತ್ರವಲ್ಲದೆ ತನ್ನ ಪತಿ, ಮಕ್ಕಳ ಮತ್ತು ಸಹೋದರಿ ವಿಪರೀತ ನೊಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ ರೋಹಿಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ರೂಪಾ ಅರ್ಜಿ ಸಲ್ಲಿಸಿದ್ದಾರೆ.