ಇರಾನ್ ಮತ್ತು ಇಸ್ರೇಲ್ ಯುದ್ದ ಕಾರ್ಮೋಡ, 24 ವಿಮಾನ ಹಾರಾಟ ರದ್ದು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ವಾಯುನೆಲೆಗಳನ್ನು ಮುಚ್ಚಲಾಗಿದೆ. ಇದರ ನೇರ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬೀರಿದ್ದು ಸೋಮವಾರ ಸಹ ಸರಣಿ ವಿಮಾನಗಳ ಹಾರಾಟ ರದ್ದುಗೊಂಡಿವೆ. ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ 09 ವಿಮಾನಗಳು ಹಾಗೂ ವಿದೇಶದಿಂದ ಆಗಮಿಸಬೇಕಿದ್ದ 15 ವಿಮಾನಗಳು ಸೇರಿದಂತೆ ಒಟ್ಟು 24 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್‌ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಖತಾರ್ ಏರ್ವೇಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ಮರು ಬುಕ್ಕಿಂಗ್ ಅಥವಾ ಪೂರ್ಣ ಹಣ ವಾಪಸ್ ಪಡೆಯಲು ಏರ್‌ಲೈನ್ಸ್‌ಗಳು ಅವಕಾಶ ಕಲ್ಪಿಸಿವೆ.

- Advertisement - 

ಯುದ್ಧದ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಅನಿಶ್ಚಿತವಾಗಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಗತಿಯನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳದೆ ವಿಮಾನ ನಿಲ್ದಾಣಕ್ಕೆ ಬರಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ. ಸಹಾಯಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಏರ್‌ಪೋರ್ಟ್‌ನಲ್ಲಿ ಹೆಲ್ಪ್‌ಡೆಸ್ಕ್ ತೆರೆಯಲಾಗಿದೆ.
ದುಬೈನಲ್ಲಿ ಒಟ್ಟು 100 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಬಳ್ಳಾರಿಯ 32 ಮಂದಿ, ಬೆಂಗಳೂರಿನ 25 ಮಂದಿ, ದಾವಣಗೆರೆಯ 9 ಮಂದಿ, ಚಿಕ್ಕಮಗಳೂರಿನ 5 ಮಂದಿ, ವಿಜಯಪುರದ 4 ಮಂದಿ, ಕೊಡಗಿನ 4 ಮಂದಿ, ದಕ್ಷಿಣ ಕನ್ನಡದ 3 ಮಂದಿ, ಶಿವಮೊಗ್ಗದ 3 ಮಂದಿ, ರಾಯಚೂರಿನ 3 ಮಂದಿ, ಚಿಕ್ಕಬಳ್ಳಾಪುರದ 2 ಮಂದಿ, ಚಿತ್ರದುರ್ಗದ 2 ಮಂದಿ, ಕಲಬುರಗಿಯ 2 ಮಂದಿ, ಉಡುಪಿಯ 2 ಮಂದಿ, ತುಮಕೂರಿನ 1 ಮಂದಿ, ಮತ್ತೆ ಮೂರು ಜನರ ಜಿಲ್ಲೆಯಾವುದು ಎಂದು ತಿಳಿದಿಲ್ಲ. ಇದರ ಬಹ್ರೇನ್‌ನಲ್ಲಿ ಒಟ್ಟು 9 ಮಂದಿ ಸಿಲುಕಿದ್ದಾರೆ. ಹಾಸನದ 4 ಮಂದಿ ಉಡುಪಿಯ 3 ಮಂದಿ ಕೊಡಗಿನ 1 ಮಂದಿ, ಮತ್ತೆ ಒಬ್ಬರ ಜಿಲ್ಲೆ ಯಾವುದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

- Advertisement - 
Share This Article
error: Content is protected !!
";