ಪರ್ಸೆಂಟೇಜ್‌ಗಾಗಿ ನೀರಾವರಿ ಮಂತ್ರಿಯಾದ ಡಿ.ಕೆ.ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ್ಸಂಟೇಜ್‌ಗಾಗಿ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಶಾಸಕನ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಆಗಮಿಸಿದ ಯತ್ನಾಳ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆ ಇನ್ನೂ ಪೂರ್ಣಗೊಳ್ಳದ ಕೇಳಿದ ಪ್ರಶ್ನೆಗೆ, ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದರೂ ನೀರಾವರಿ ಮಂತ್ರಿ ಆಗುವ ಉದ್ದೇಶ ಏನಿತ್ತು? ಪರ್ಸಂಟೇಜ್‌ಗಾಗಿ ಡಿಕೆಶಿ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.

ಕೋವಿಡ್ ಬಗ್ಗೆ ಭ್ರಷ್ಟಾಚಾರ ನಡೆದಿದೆ ಎಂದು ಈಗ ಡಿಕೆಶಿ ಮಾತನಾಡುತ್ತಿದ್ದಾರೆ. ಅದೇ ಡಿಕೆ ಶಿವಕುಮಾರ್ ಹಳೆ ಬಿಲ್ಲು ನೀಡಲು 10% ಹಣ ಹೊಡೆಯುತ್ತಿದ್ದಾರೆ. ಬಿಬಿಎಂಪಿಯಲ್ಲಂತೂ ಚದರ ಅಡಿಗಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮೇಕೆದಾಟು ಹೋರಾಟ ಎಂದೆಲ್ಲಾ ಮಾತನಾಡುತ್ತಿದ್ದ ಡಿಕೆಶಿ ಈ ದಂಡೆಯಿಂದ ಆ ದಂಡೆಗೆ ಹೋಗುವ ಗಿರಾಕಿ ಎಂದು ಕಿಡಿಕಾರಿದರು.

40 ಸಾವಿರ ಕೋಟಿ ಕೊಡುತ್ತೇವೆ. ಭಾರೀ ಅನುದಾನ ನೀಡುತ್ತೇವೆ ಎಂದು ಉತ್ತರ ಕರ್ನಾಕಟದ ಬಗ್ಗೆ ಕೇವಲ ಡೈಲಾಗ್ ಹೊಡೆಯುವುದು ಬಿಟ್ಟರೆ ನಿಜವಾದ ಕಾಳಜಿ ಇವರಿಗೆ ಇಲ್ಲ ಎಂದು ಅವರು ಕಿಡಿಕಾರಿದರು.

ಉತ್ತರ ಕರ್ನಾಟಕದವರು ನೀರಾವರಿ ಮಂತ್ರಿಯಾಗುವುದಿಲ್ಲ. 60 ವರ್ಷಗಳಿಂದ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆ ಪೂರ್ಣಗೊಳ್ಳದೇ ಇರಲು ಎಲ್ಲಾ ಸರ್ಕಾರಗಳು ಕಾರಣ. ಬೊಮ್ಮಾಯಿ, ಕಾರಜೋಳ, ಹೆಚ್‌ಕೆ ಪಾಟೀಲ್‌, ಎಂಬಿ ಪಾಟೀಲ್‌ಇದ್ದಾಗ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಹಣ ಇಡದೇ ಇದ್ದರೆ ಪಾಪ ಅವರು ಏನು ಮಾಡಲು ಸಾಧ್ಯ ಎಂದು ಯತ್ನಾಳ್ ಪ್ರಶ್ನಿಸಿದರು.

 

 

 

- Advertisement -  - Advertisement - 
Share This Article
error: Content is protected !!
";