ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು! ಬೆಳಗಾವಿಯ ಸುವರ್ಣಸೌಧದೊಳಕ್ಕೆ ಗೂಂಡಾಗಳನ್ನು ಬಿಟ್ಟಿದ್ದಕ್ಕೆ ಪೊಲೀಸರಿಗೆ ಬಹುಮಾನ ಘೋಷಿಸಿದ್ದೀರಾ? ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಸುವರ್ಣಸೌಧದ ಬಳಿಯೇ ಜನಪ್ರತಿನಿಧಿಗೆ ರಕ್ಷಣೆ ನೀಡದ ಆರಕ್ಷಕರಿಗೆ ಬಹುಮಾನವೇ? ಅಧಿವೇಶನದ ವೇಳೆಯೇ ಓರ್ವ ವಿಧಾನ ಪರಿಷತ್ ಸದಸ್ಯರನ್ನು ಕೊಲ್ಲಲು ಸುವರ್ಣಸೌಧಕ್ಕೆ ಕೊತ್ವಾಲ್ ಶಿಷ್ಯನ ಪಟಾಲಂ ಪ್ರವೇಶಕ್ಕೆ ಅವಕಾಶ ನೀಡಿದ್ದಕ್ಕೆ ಪೊಲೀಸರಿಗೆ ಬಹುಮಾನ ನೀಡಿದಿರಾ? ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಎಳೆದೊಯ್ದಿದ್ದಕ್ಕೆ ಪೊಲೀಸರಿಗೆ ಬಹುಮಾನ ಕೊಟ್ಟಿರಾ? ಎಂದು ಜೆಡಿಎಸ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದೆ.
ಮೀಸಲಾತಿ ಕೇಳಿದಕ್ಕೆ ಲಾಠಿ ಚಾರ್ಚ್ ಮಾಡಿಸಿ ಪಂಚಮಸಾಲಿಗಳಿಗೆ ರಕ್ತ ಬರುವಂತೆ ಹೊಡೆದಿದ್ದಕ್ಕಾಗಿ ಪೊಲೀಸರಿಗೆ ಬಹುಮಾನವೇ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಅವರ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರಿಗೆ ಬಹುಮಾನವೇ? ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವ ಪಾಪದ ಕೆಲಸಗಳನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.