ಶಿಕ್ಷಕರ ನೇಮಕ ಮಾಡುವಂತೆ ಖರ್ಗೆ ಅಂಗಲಾಚುತ್ತಿರುವುದು ನಾಚಿಕೆಗೇಡು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರೇ ನಿಮ್ಮದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರನ್ನು ಭರ್ತಿ ಮಾಡಿ ಎಂದು ಪದೇ ಪದೇ ಅಂಗಲಾಚುತ್ತಿರುವುದು ನಾಚಿಕೆಗೇಡು ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಕಾಂಗ್ರೆಸ್‌ಅಧಿಕಾರಕ್ಕೆ ಬಂದು 2.5 ವರ್ಷವಾದರೂ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 3 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡದೆ ಗಾಢನಿದ್ದೆಯಲ್ಲಿದೆ.

- Advertisement - 

ಪ್ರತಿ ಬಾರಿಯೂ ಶಿಕ್ಷಕರ ಹುದ್ದೆ ಭರ್ತಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂಡಿ.ಕೆ ಶಿವಕುಮಾರ್ ಬಳಿ ಗೋಗರೆಯುತ್ತೀರಿ. ಆದರೂ ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಜೆಡಿಎಸ್ ದೂರಿದೆ.

ಭಂಡ ಕಾಂಗ್ರೆಸ್‌ಸರ್ಕಾರ ಗ್ಯಾರಂಟಿಯಿಂದ ಬೋರ್‌ವೆಲ್‌ಹಾಕಿಸಿದರು, ಫ್ರಿಡ್ಜ್‌ತೆಗೆದುಕೊಂಡರು, ವಾಷಿಂಗ್‌ಮೆಷಿನ್‌ತೆಗೆದುಕೊಂಡರು ಎಂದು ಜನರನ್ನು ಯಾಮಾರಿಸುತ್ತಾ ಕಾಲಹರಣ ಮಾಡುತ್ತಿದೆ.

- Advertisement - 

ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದರೂ, ಹೊಣೆಗೇಡಿ ಕಾಂಗ್ರೆಸ್‌ಸರ್ಕಾರ ಹುದ್ದೆ ಭರ್ತಿ ಮಾಡದೆ ಉದ್ಯೋಗಾಕಾಂಕ್ಷಿಗಳ ಬಾಳಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.

 

 

Share This Article
error: Content is protected !!
";