ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಂಡು ಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಎಲ್ಲರ ಪ್ರಾಣ ಮಾನ ಕಾಪಾಡಿದ ರಾಜಾವೀರ ಮದಕರಿನಾಯಕರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ ತಿಳಿಸಿದರು.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ರಾಜ ವೀರ ಮದಕರಿನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜವೀರ ಮದಕರಿ ನಾಯಕ ವಂಶಸ್ಥರು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಶ್ರೀಶೈಲಾ ಬಳಿಯ ಜಡಿಕಲ್ಲು ಗುಡ್ಡದಿಂದ ಬಂದು ವಿಜಯನಗರ ರಾಜರ ಬಳಿ ಆಶ್ರಯ ಪಡೆದು ತದ ನಂತರ ಅವರಿಂದ ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳನ್ನು ಬಳುವಳಿಯಾಗಿ ಪಡೆದು ತಮ್ಮ ರಾಜ್ಯವನ್ನು ಸ್ಥಾಪನೆ ಮಾಡಿದರು. ನಂತರ ಹೊಸದುರ್ಗ ತಾಲ್ಲೂಕಿನ ಜಾನಕಲ್ಲು ಬಳಿ ಬಂದು ಆಶ್ರಯ ಪಡೆದರು.
ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದರು. ಜಾನುವಾರುಗಳಿಗೆ ನೀರಿನ ತೊಂದರೆ ಆಗದಂತೆ ವೈಜ್ಞಾನಿಕವಾಗಿ ನೀರಿನ ವ್ಯವಸ್ಥೆ ಮಾಡುವುದು ಇಂದಿಗೂ ಜೀವಂತ ಸಾಕ್ಷಿಯಾಗಿದೆ. ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುವುದರ ಮೂಲಕ ನೀರಿನ ಸಮಸ್ಯೆ ನಿವಾರಣೆ ಮಾಡಿದರು ಅದನ್ನು ಈಗಲೂ ಸಹಾ ನೋಡಬಹುದಾಗಿದೆ ಎಂದರು.
ಒಮ್ಮೆ ಆನೆ ಮದವೇರಿತ್ತು ಇದನ್ನು ಕಂಡ ಅಗಿನ ರಾಜರಾದ ಇವರು ಅದನ್ನು ಹಿಡಿದು ಪಳಗಿಸಿ ತಹ ಬದಿಗೆ ತಂದರು. ಇದನ್ನು ಕಂಡ ಶೃಂಗೇರಿಯ ಶ್ರೀಗಳು ಇವರಿಗೆ ಮದಕರಿ ಎಂದು ಬಿರುದು ನೀಡಿದರು. ಆಗಿನಿಂದ ಇವರ ಹೆಸರಿನಲ್ಲ್ಲಿ ಮದಕರಿ ಸೇರಿತು. ಇವರಿಗೆ ೧೨ ವರ್ಷದಲ್ಲಿ ಪಟ್ಟ ಕಟ್ಟಲಾಯಿತು.
ಸಂಘ ಪರಿವಾರದ ಸಾಮರಸ್ಯ ಸಂಘಟಕ ವಾದಿರಾಜ್ ಅವರು ಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ಕಾರ್ಯಕಾರಣಿ ಮಾಜಿ ಸದಸ್ಯ ಪಾಪೇಶ್ ನಾಯಕ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೇಕಾಯಿ ರಾಮ್‌ದಾಸ, ಮುಖಂಡ ಕೆ ಟಿ ಕುಮಾರಸ್ವಾಮಿ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಕವನ, ನಿಕಟಪೂರ್ವ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಮಂಜುನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಚಿತ್ರ ನಾಯಕ ಸಂಘದ ಅಧ್ಯಕ್ಷ ಪ್ರಶಾಂತ್ ಕೂಲಿಕಾರ್, ಯುವ ಮುಖಂಡ ಸೋಮು, ರೈತ ಮಾರುತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಮ್ಮನಹಳ್ಳಿ ನಾಗರಾಜ್, ಬೋಸೆ ರಂಗಸ್ವಾಮಿ, ಎಸ್ಟಿ ಮೋರ್ಚಾ ಗ್ರಾಮಾಂತರ ಮತ್ತು ನಾಯಕನಹಟ್ಟಿ ಮಂಡಲ ಅಧ್ಯಕ್ಷ ಶಿವಪ್ರಸಾದ್, ಪಾರ್ವತಯ್ಯ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.