ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ಬಾಬಾ ಸಾಹೇಬ್‌ಡಾ.ಬಿ.ಆರ್.ಅಂಬೇಡ್ಕರ್‌ಅವರನ್ನು ಚುನಾವಣೆಯಲ್ಲಿ ಸಂಚು ಮಾಡಿ ಸೋಲಿಸಿದ್ದು ಇದೇ ಭಾರತೀಯ ಕಾಂಗ್ರೆಸ್ ಪಕ್ಷ ಎಂಬುದು ಜಗಜ್ಜಾಹೀರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಂವಿಧಾನ ಶಿಲ್ಪಿಯ ಅಂತ್ಯಸಂಸ್ಕಾರಕ್ಕೆ ಕೊನೇಪಕ್ಷ ಜಾಗವನ್ನು ನೀಡದೆ ದ್ವೇಷ ಕಾರಿದ್ದು ಇದೇ ಕಾಂಗ್ರೆಸ್. ಈ ಘೋರ ಅನ್ಯಾಯ ಮಾಡಿದ ಈ ಪಕ್ಷವನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.
ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ ಬಾಬಾ ಸಾಹೇಬ್‌ಅವರಿಗೆ ಭಾರತರತ್ನ ನೀಡದೇ ಅಗೌರವ ತೋರಿದ ಮಹಾನ್‌ವಂಚಕರು ಕಾಂಗ್ರೆಸ್ಸಿಗರು. ಬದುಕಿದ್ದಾಗ ಸದಾ ಹೀಯ್ಯಾಳಿಕೆ, ಅವಮಾನ ಮಾಡಿದ್ದ ಕಾಂಗ್ರೆಸ್‌ನಾಯಕರು ಇಂದು ಉತ್ತಮರಂತೆ ನಟಿಸುತ್ತಿದ್ದಾರೆ! ನಾಚಿಕೆಗೇಡು!!
ಕಾಂಗ್ರೆಸ್ಸಿಗರೇ, ಹಿಂದೆ ನೀವು ಬಾಬಾ ಸಾಹೇಬ್‌ಅಂಬೇಡ್ಕರ್‌ಅವರನ್ನು ಯಾವು ರೀತಿ ನಡೆಸಿಕೊಂಡಿದ್ದೀರಿ ಎಂಬ ಕರಾಳ ಇತಿಹಾಸವನ್ನು ಒಮ್ಮೆ ಓದಿ. ಇತಿಹಾಸವನ್ನು ಮುಗಿಸುವುದು ಅಷ್ಟು ಸುಲಭವಲ್ಲ ಎಂದು ಜೆಡಿಎಸ್ ತಾಕೀತು ಮಾಡಿದೆ.