ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸುವುದು ಅವೈಜ್ಞಾನಿಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ಸಿಗರು ಸದಾ “ಸಿದ್ದ”ಹಸ್ತರು!! ಎಂದು ಬಿಜೆಪಿ ಟೀಕಿಸಿದೆ.

- Advertisement - 

ಬ್ರ್ಯಾಂಡ್ ಬೆಂಗಳೂರಿನ ದಯನೀಯ ವೈಫಲ್ಯವನ್ನು ಜನರ ಗಮನದಿಂದ ಬೇರೆಡೆ ಸೆಳೆಯಲು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸೃಷ್ಟಿಸಿದ ಹೊಸ ನಾಟಕವೇ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲು ಹೊರಟಿದ್ದು!! ಅಸಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ತಾಲೂಕುಗಳನ್ನು ಸೇರಿಸಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿಸಿ ರಾಮನಗರ ಜಿಲ್ಲೆಯನ್ನು ರಚಿಸಲಾಗಿತ್ತು.

- Advertisement - 

 ಆ ಭಾಗದ ಜನತೆಗೆ ಇದೊಂದು ವರದಾನವಾಗಿತ್ತು. ರಾಮನಗರ ಜಿಲ್ಲಾ ಕೇಂದ್ರವಾದ ಕಾರಣ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ವೇಗ ದೊರೆತಿತ್ತು ಎಂದು ಬಿಜೆಪಿ ತಿಳಿಸಿದೆ.

ಆದರೆ ರಾಮನಗರ ಜಿಲ್ಲೆಯನ್ನು ಈಗ ಏಕಾಏಕಿ ಬೆಂಗಳೂರು ದಕ್ಷಿಣ ಎಂದು ಬದಲಿಸಲು ಹೊರಟಿರುವುದು ಮಾತ್ರ ಸಂಪೂರ್ಣ ಅವೈಜ್ಞಾನಿಕ. ಈಗಾಗಲೇ ಬೆಂಗಳೂರು ದಕ್ಷಿಣ ಎಂಬ ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳಿವೆ.

- Advertisement - 

ಅದಲ್ಲದೆ ಬೆಂಗಳೂರು ದಕ್ಷಿಣ ಎಂಬ ತಾಲೂಕು ಮತ್ತು ಜಿಲ್ಲೆ ಬೆಂಗಳೂರು ನಗರ ವ್ಯಾಪ್ತಿಯನ್ನೊಳಗೊಂಡ ಪ್ರದೇಶಗಳಿಂದ ರಚನೆಯಾಗಿದೆ. ಈಗ ಏಕಾಏಕಿ ಮತ್ತೊಂದು ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿದರೆ,ಅದು ಆಡಳಿತಾತ್ಮಕವಾಗಿ ಒಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುವುದು ನಿಶ್ಚಿತ ಎಂದು ಬಿಜೆಪಿ ಎಚ್ಚರಿಸಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವೈಯುಕ್ತಿಕ ಪ್ರತಿಷ್ಠೆ ರಾಮನಗರ ಜಿಲ್ಲೆಯ ಜನತೆಗೆ ಮತ್ತೊಂದು ಸಮಸ್ಯೆಯನ್ನು ತಂದಿಡುವುದು ಖಂಡಿತ. ಡಿ.ಕೆ.ಶಿವಕುಮಾರ್ ಅವರಿಗೆ ನಿಜಕ್ಕೂ ರಾಮನಗರ ಜಿಲ್ಲೆಯ ಜನತೆಗೆ ಒಳಿತನ್ನು ಮಾಡಬೇಕೆಂಬ ಇರಾದೆ ಇದ್ದರೆರಾಮನಗರ ಜಿಲ್ಲೆಯಾದ್ಯಂತ ಪಸರಿಸಿರುವ ರಿಪಬ್ಲಿಕ್ ಆಫ್ ಕನಕಪುರ ಮಾಡೆಲ್ ಗೆ ಅಂತ್ಯ ಹಾಡಲಿ.

ರಾಮನಗರ ಜಿಲ್ಲೆಯ ಆಧ್ಯಾತ್ಮಿಕ ಹಾಗೂ ಗ್ರಾಮೀಣ ರೇಷ್ಮೆಯ ಸೊಗಡನ್ನು ಉಳಿಸಿಕೊಂಡು ಹೋಗಲು ರಾಜಕೀಯವನ್ನು ಬದಿಗಿರಿಸಿ ಅಭಿವೃದ್ಧಿಗಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲಿ ಎಂದು ಬಿಜೆಪಿ ತಾಕೀತು ಮಾಡಿದೆ.

Share This Article
error: Content is protected !!
";