ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಕೆ ಶಿವಕುಮಾರ್ ಅವರನ್ನ ಗಂಗಾ ನದಿಯಲ್ಲಿ ಮುಳುಗಿಸಿದ್ದಂತೆ ಆಯ್ತು ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದರು.
ಚಿತ್ರದುರ್ಗದಲ್ಲಿ ಜಾರಕಿಹೊಳಿ ಕುರಿತು ಯತೀಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನೇ ಸಿಎಂ ಎಂದು ಟವನ್ ಹಾಕಿ ಕುಳಿತಿದ್ರು ಪಾಪ ಡಿಕೆಶಿಗೆ ನಿರಾಸೆ ಆಗಿದೆ. ಸಿದ್ದರಾಮಯ್ಯ ಅವರ ಗುಂಪು ಡಿಕೆಶಿ ಯಾವತ್ತೂ ಸಿಎಂ ಆಗಬಾರ್ದು ಅಂತ ಪ್ಲಾನ್ ಮಾಡಿದೆ, ಆ ತರವಾದ ಸ್ಟಾಟರ್ಜಿಯನ್ನ ಸಿದ್ದರಾಮಯ್ಯ ಬೆಂಬಲಿಗರ ಕೈಯಲ್ಲಿ ಮಾಡಿಸುತ್ತಾರೆ.
ನವೆಂಬರ್ ಕ್ರಾಂತಿ ಅಂತ ನಾನು ಹೇಳಿದ್ದೆ, ಅವರು ಇಲ್ಲ ಎನ್ನುತ್ತಿದ್ರು ಸಿದ್ದರಾಮಯ್ಯ ಅವರ ಮಗ ಬೆಳಗಾವಿಯಲ್ಲಿ ಹೇಳುವಂತದ್ದೇನಿತ್ತು ಕಳೆದ ಬಾರಿ ನಮ್ಮ ಸರ್ಕಾರ ಬೆಳಗಾವಿಯಿಂದ ರಚನೆ ಆಗಿದ್ದು. ಬೆಳಗಾವಿ ಸರ್ಕಾರ ಬೀಳಿಸಲು ಯತೀಂದ್ರ ಗುದ್ದಲಿ ಪೂಜೆ ಮಾಡಿದ್ದಾರೆ. ನಮ್ಮ ಹೇಳಿಕೆ ಸುಳ್ಳು ಎನ್ನುತ್ತಿದ್ರು, ಅದು ನಿಜ ಆಗುತ್ತಿದೆ ಎಂದು ಅಶೋಕ್ ತಿಳಿಸಿದರು.
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಆರ್ ಎಸ್ ಎಸ್ ವಿಚಾರ, ಜಾತಿ ಗಣತಿಯಲ್ಲಿ ಗೊಂದಲಕ್ಕೆ ಸಿಲುಕಿದೆ. ಅಭಿವೃದ್ಧಿ ಮರೆತು ಈ ತರ ಚರ್ಚೆಗೆ ಅಗತ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗ ಬಿದ್ದು ಹೋಗುತ್ತೋ ಗೊತ್ತಿಲ್ಲ. ಜಾರಕಿಹೊಳಿ ಡಿಕೆಶಿಗೆ ತಪ್ಪಿಸಲು ಟವಲ್ ಹಾಕಿದ್ದಾರೆ. ಸರ್ಕಾರ ಬಿದ್ರೆ ಹೊಸ ಚುನಾವಣೆಗೆ ನಾವು ಹೋಗುತ್ತೇವೆ ಎಂದು ಅವರು ತಿಳಿಸಿದರು.
ಡಿಎಸ್ಎಸ್ ಮತ್ತು ಬೀಮ್ ಸಂಘಟನೆ ಮಾಡಲು ತೊಂದರೆ ಏನಿಲ್ಲ, ನಿಲ್ಲಿಸಲು ಯಾವತ್ತೂ ನಾನು ಹೇಳಿಲ್ಲ. ಆರ್.ಎಸ್.ಎಸ್ ಪಥಸಂಚಲನಕ್ಕೆ ವಿರೋಧ ಅಭಿವೃದ್ಧಿ ಕುಂಟಿತ ಕಾರಣ. ಇದೇ ಕಾರಣಕ್ಕೆ ಡೈವರ್ಟ್ ಮಾಡಲು ಈ ಹೇಳಿಕೆ ನೀಡುತ್ತಿದ್ದಾರೆ. ಈ ಸರ್ಕಾರ ಬಹಳ ದಿನ ಇರಲ್ಲ, ನೆಗದು ಬಿದ್ದು ಹೋಗುತ್ತೆ. ಆರ್ ಎಸ್ ಎಸ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ತಿಳಿಸಿದರು.
ರಾಷ್ಟ್ರೀಯತೆ ಬೆಳೆಸುವ ಸಂಸ್ಥೆ, ದೇಶಕ್ಕಾಗಿ ತ್ಯಾಗ ಮಾಡುತ್ತಿದೆ ಬಿಜೆಪಿಗೂ, ಸಂಘಕ್ಕೂ ಹೋಲಿಕೆ ಬೇಡ ನಮ್ಮಲ್ಲಿ ಯಾವತ್ತೂ ಜಾತೀಯತೆ ಮಾತ್ರ ಇಲ್ಲ ಎಂದು ಆರ್.ಅಶೋಕ್ ತಿಳಿಸಿದರು.

