Ad imageAd image

ಕಾಯಕವೇ ಕೈಲಾಸದ ಸಾರ ತೋರಿಸಿದವರು ಗುರು ಸಿದ್ದರಾಮೇಶ್ವರರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವಣ್ಣನವರ ಕಾಯಕವೇ ಕೈಲಾಸದ ಸಾರವನ್ನು ಮಾಡಿ ತೋರಿಸಿದವರು ಗುರು ಸಿದ್ದರಾಮೇಶ್ವರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರರ 852 ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನೊಳಂಬ ಇತಿಹಾಸ ಮತ್ತು ಸಂಘದ ಸಾಕ್ಷಾ ಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಸವಾದಿ ಶರಣರೆಲ್ಲರೂ ವಾಸ್ತವ ಜಗತ್ತಿನ ಮನುಷ್ಯ ಸಂಬಂಧಗಳ ಪ್ರೇರಣೆ ನೀಡಿದರೆ, ಗುರು ಸಿದ್ದರಾಮೇಶ್ವರರು ವಚನ ಸಾಹಿತ್ಯದ ಜೊತೆಗೆ ಸ್ವತಃ ಶಿವನ ದರ್ಶನ ಮಾಡಿ, ಪವಾಡ ಪುರುಷರಾಗಿ ಮನುಷ್ಯ ಧರ್ಮ ದೇವರಿಗೆ ಪ್ರಿಯವಾದ ಧರ್ಮಎಂದು ಜಗತ್ತಿಗೆ ಸಾರಿದ ಅವರ ತಪಸ್ವೀ ಜೀವನವನ್ನು ಸ್ಮರಿಸಲಾಯಿತು ಎಂದು ವಿಜಯೇಂದ್ರ ತಿಳಿಸಿದರು.

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ ಡಿಕೆ ಶಿವಕುಮಾರ್ ಅವರಿಗೆ ಭೂಮಿ ನೀಡುವ ವಿಷಯದಲ್ಲಿ ತಿರುಗೇಟು ನೀಡಿದರು.
ರೈತರಿಗೆ ಸರ್ಕಾರ ಭೂಮಿ ನೀಡಬೇಕಾಗಿದೆ
, ಸರ್ಕಾರ ನಡೆಸುತ್ತಿರುವವರು ಅವರು ಮತ್ತು ಸಮಿತಿಗಳು ಕೂಡ ಅವರ ನೇತೃತ್ವದಲ್ಲೇ ಇವೆ. ನಾನು ಹೇಗೆ ಭೂಮಿ ಕೊಡುವುದು ಸಾಧ್ಯ? ಅವರೇ ಭೂಮಿ ಕೊಡಬೇಕಾಗಿದ್ದು, ತಾನಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ವಿಷಯದ ಬಗ್ಗೆ ದೆಹಲಿಗೆ ಹೋಗುವ ಮೊದಲು ಸವಿಸ್ತಾರವಾಗಿ ಮಾತಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯಶ್ರೀಗಳು, ಗೋಡೇಕೆರೆ ಶ್ರೀ ಮೃತ್ಯುಂಜಯ ದೇಶೀ ಕೇಂದ್ರ ಶ್ರೀಗಳು, ಪರಮಪೂಜ್ಯ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಶ್ರೀಗಳು, ಮಾಜಿ ಮುಖ್ಯಮಂತ್ರಿ ಬಿ.ವೈ.ಯಡಿಯೂರಪ್ಪ, ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಎಂ.ಕಾರಜೋಳ, ಸಚಿವರಾದ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ  ಕೆ.ಗೋಪಾಲಯ್ಯ, ಶಾಸಕರಾದ ಎಸ್.ಆರ್.ವಿಶ್ವನಾಥ್, ಜಿ.ಬಿ.ಜ್ಯೋತಿಗಣೇಶ್,

ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಎಸ್.ಎಂ.ನಾಗರಾಜ್, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಎನ್.ಸಿದ್ಧರಾಮಪ್ಪ, ವಕೀಲರಾದ ಡಾ.ಸಂದೀಪ್ ಪಾಟೀಲ್, ಮುಖಂಡರಾದ ಲೋಕೇಶ್ವರ್,  ಎಸ್.ಡಿ.ದಿಲೀಪ್ ಕುಮಾರ್, ಹೆಚ್.ಎನ್.ಚಂದ್ರಶೇಖರ್ ಸೇರಿದಂತೆ ವಿವಿಧ ಮಠಗಳ ಪರಮಪೂಜ್ಯರು, ಹರಗುರುಚರಮೂರ್ತಿಗಳು, ಸಮಾಜದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";