ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು, ಭಾರತದ ಸಂವಿಧಾನ ಅಂಗೀಕಾರವಾಗಿ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ, ಬುಧವಾರ ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ಅಂಬೇಡ್ಕರ್‌ಅವರ ನಾಯಕತ್ವದಲ್ಲಿ ಸಂವಿಧಾನದ ಕರಡು ಸಮಿತಿ ರಚಿಸಲಾಯಿತು. ಅವರ ದೂರದೃಷ್ಟಿಯ ಫಲವಾಗಿ ವಿಶ್ವದ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಬಡಕುಟುಂಬದ ರೈತನ ಮಗನಾದ ನನ್ನನ್ನು ಪ್ರಧಾನಿ ಸ್ಥಾನಕ್ಕೆ ಏರುವಂತೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್‌ಅವರು ನೀಡಿದ ಸಂವಿಧಾನ ಎಂದು ಗೌಡರು ತಿಳಿಸಿದರು.
ನಾನು ಪ್ರಧಾನಿಯಾಗಿದ್ದ ವೇಳೆ ಕಾಶ್ಮೀರದಲ್ಲಿ ಚುನಾವಣೆ ನಡೆಸಿದ್ದೆ. ಜೊತೆಗೆ ಈಶಾನ್ಯ ರಾಜ್ಯಗಳಿಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ ನಾನು, ಇದೇ ವೇಳೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ 6,100 ಕೋಟಿ ಆರ್ಥಿಕ ಪ್ಯಾಕೇಜ್‌ನೀಡಲಾಯಿತು ಎಂದು ದೇವೇಗೌಡರು ಸ್ಮರಿಸಿದರು.
50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಭಾರತದ ಶ್ರೇಷ್ಠ ಸಂವಿಧಾನವನ್ನು ಅಮಾನತಿನಲ್ಲಿಟ್ಟು, ದೇಶದೆಲ್ಲೆಡೆ ವಿರೋಧ ಪಕ್ಷಗಳ ಸಾವಿರಾರು ಮುಖಂಡರನ್ನು ಜೈಲಿಗೆ ಹಾಕಿದರು.
ನನ್ನನ್ನು ಸಹ ಸೆರೆಮನೆಗೆ ಹಾಕಿ, ನಮ್ಮ ತಂದೆಯವರಿಗೂ ನನ್ನ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಅಂದಿನ ಕರಾಳ ತುರ್ತು ಪರಿಸ್ಥಿತಿಯ ಕಹಿ ಘಟನೆಯನ್ನು ರಾಜ್ಯಸಭೆ ಕಲಾಪದಲ್ಲಿ ದೇವೇಗೌಡರು ನೆನೆದರು.
Contents
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು, ಭಾರತದ ಸಂವಿಧಾನ ಅಂಗೀಕಾರವಾಗಿ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ, ಬುಧವಾರ ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ಅಂಬೇಡ್ಕರ್‌ಅವರ ನಾಯಕತ್ವದಲ್ಲಿ ಸಂವಿಧಾನದ ಕರಡು ಸಮಿತಿ ರಚಿಸಲಾಯಿತು. ಅವರ ದೂರದೃಷ್ಟಿಯ ಫಲವಾಗಿ ವಿಶ್ವದ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಬಡಕುಟುಂಬದ ರೈತನ ಮಗನಾದ ನನ್ನನ್ನು ಪ್ರಧಾನಿ ಸ್ಥಾನಕ್ಕೆ ಏರುವಂತೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್‌ಅವರು ನೀಡಿದ ಸಂವಿಧಾನ ಎಂದು ಗೌಡರು ತಿಳಿಸಿದರು.ನಾನು ಪ್ರಧಾನಿಯಾಗಿದ್ದ ವೇಳೆ ಕಾಶ್ಮೀರದಲ್ಲಿ ಚುನಾವಣೆ ನಡೆಸಿದ್ದೆ. ಜೊತೆಗೆ ಈಶಾನ್ಯ ರಾಜ್ಯಗಳಿಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ ನಾನು, ಇದೇ ವೇಳೆ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ 6,100 ಕೋಟಿ ಆರ್ಥಿಕ ಪ್ಯಾಕೇಜ್‌ನೀಡಲಾಯಿತು ಎಂದು ದೇವೇಗೌಡರು ಸ್ಮರಿಸಿದರು.50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಭಾರತದ ಶ್ರೇಷ್ಠ ಸಂವಿಧಾನವನ್ನು ಅಮಾನತಿನಲ್ಲಿಟ್ಟು, ದೇಶದೆಲ್ಲೆಡೆ ವಿರೋಧ ಪಕ್ಷಗಳ ಸಾವಿರಾರು ಮುಖಂಡರನ್ನು ಜೈಲಿಗೆ ಹಾಕಿದರು.ನನ್ನನ್ನು ಸಹ ಸೆರೆಮನೆಗೆ ಹಾಕಿ, ನಮ್ಮ ತಂದೆಯವರಿಗೂ ನನ್ನ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಅಂದಿನ ಕರಾಳ ತುರ್ತು ಪರಿಸ್ಥಿತಿಯ ಕಹಿ ಘಟನೆಯನ್ನು ರಾಜ್ಯಸಭೆ ಕಲಾಪದಲ್ಲಿ ದೇವೇಗೌಡರು ನೆನೆದರು.